ಚಂಡೀಗಢ(ಡಿ.17): ಚಂಡೀಗಢದ ಟೈಲರ್ ಒಬ್ಬನ ಮನೆ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಅಕ್ಷರಶಃ ಶಾಕ್ ಆಗಿದೆ. ಟೈಲರ್ ಬಳಿ ಬರೋಬ್ಬರಿ 30 ಲಕ್ಷ ರೂಪಾಯಿಯಷ್ಟು ಹೊಸ ನೋಟು ಮತ್ತು 2.5 ಕೆ.ಜಿ ಬಂಗಾರ ಸಿಕ್ಕಿದೆ. ಮೊಹಾಲಿಯಲ್ಲಿ ಜವಳಿ ಉದ್ಯಮಿ ಬಳಿ 2.19 ಕೋಟಿ ರೂಪಾಯಿ ಹೊಸ ನೋಟು ವಶಪಡಿಸಿಕೊಂಡ ಮಾರನೇ ದಿನವೇ ಈ ದಾಳಿ ನಡೆದಿದೆ.
ವಶಪಡಿಸಿಕೊಂಡ ಹಣದಲ್ಲಿ 18 ಲಕ್ಷ ರೂಪಾಯಿಯಷ್ಟು 2000 ರೂಪಾಯಿಯ ಹೊಸ ನೋಟುಗಳು, ಉಳಿದದ್ದು 100 ಮತ್ತು 50 ರೂಪಾಯಿಯ ನೋಟುಗಳಾಗಿವೆ. ಇಷ್ಟೊಂದು ಹಣ ಎಲ್ಲಿಂದ ಬಂತು ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಇಡಿ ಹೇಳಿದೆ.