ರಾಷ್ಟ್ರೀಯ

44 ನಕಲಿ ಖಾತೆಗಳಿಂದ 100 ಕೋಟಿ ರು. ಜಪ್ತಿ

Pinterest LinkedIn Tumblr

axis bankನವದೆಹಲಿ: ದೆಹಲಿಯ ಚಾಂದ್ನಿ ಚೌಕ್ ನಲ್ಲಿರುವ ಎಕ್ಸಿಸ್ ಬ್ಯಾಂಕ್‍ ಶಾಖೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ನಡೆಸಿದ್ದು, ದಾಳಿ ವೇಳೆ 44 ನಕಲಿ ಖಾತೆಗಳಲ್ಲಿದ್ದ ಸುಮಾರು 100 ಕೋಟಿ ರುಪಾಯಿಯನ್ನು ಜಪ್ತಿ ಮಾಡಿದ್ದಾರೆ.
ನವೆಂಬರ್ 8ರಂದು ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ಈ ನಕಲಿ ಬ್ಯಾಂಕ್ ಖಾತೆಗಳಲ್ಲಿ ಹಳೆ 500 ಹಾಗೂ 1000 ರುಪಾಯಿ ಮುಖಬೆಲೆಯ ಒಟ್ಟು 100 ಕೋಟಿ ಇದೆ ಜಮೆ ಆಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ನೋಟ್ ನಿಷೇಧಿಸಿದ ನಂತರ ನಂತರ ಈ ಶಾಖೆಯಲ್ಲಿ ಒಟ್ಟು 450 ಕೋಟಿ ಜಮೆ ಆಗಿದ್ದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ಬಗ್ಗೆಯೂ ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.
ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ದೆಹಲಿಯ ಎಕ್ಸಿಸ್ ಬ್ಯಾಂಕ್‍ ಮೇಲೆ ಐಟಿ ಅಧಿಕಾರಿಗಳು ನಡೆಸಿದ ಎರಡನೇ ದಾಳಿ ಇದಾಗಿದೆ. ಕೆಲವು ದಿನಗಳ ಹಿಂದಷ್ಟೇ ದೆಹಲಿಯ ಕಾಶ್ಮೀರಿ ಗೇಟ್ ನ ಎಕ್ಸಿಸ್ ಬ್ಯಾಂಕ್ ಶಾಖೆಯ ಮೇಲೆ ದಾಳಿ ನಡೆಸಿದ್ದರು.

Comments are closed.