ರಾಷ್ಟ್ರೀಯ

ಮುಸ್ಲಿಮರನ್ನು ಉಪರಾಷ್ಟ್ರಪತಿಯಾಗಲು ಪ್ರಧಾನಿ ಬಿಡುವುದಿಲ್ಲ: ಕೇಜ್ರಿವಾಲ್

Pinterest LinkedIn Tumblr

kejrivalನವದೆಹಲಿ: ಮುಸ್ಲಿಮರು ಭಾರತದ ಉಪರಾಷ್ಟ್ರಪತಿಯಾಗಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಂದಿಗೂ ಬಿಡುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬುಧವಾರ ಹೇಳಿದ್ದಾರೆ.
ಟ್ವಿಟರ್ ನಲ್ಲಿ ಹೇಳಿಕೊಂಡಿರುವ ಅವರು, ನಜೀಬ್ ಜಂಗ್ ಅವರು ಯಾವುದೇ ಕೆಲಸವನ್ನು ಮಾಡಿದರೂ, ಏನನ್ನೇ ಮಾಡಿದರೂ ಅದು ಲೆಕ್ಕಕ್ಕೆ ಬರುವುದಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಂದಿಗೂ ಮುಸ್ಲಿಮರು ಭಾರತದ ಉಪರಾಷ್ಟ್ರಪತಿಯಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ನಜೀಬ್ ಜಂಗ್ ಅವರು ಉಪರಾಷ್ಟ್ರಪತಿ ಸ್ಥಾನದ ಆಕಾಂಕ್ಷೆಯಲ್ಲಿದ್ದು, ಅವರು ತಮ್ಮ ಆತ್ಮವನ್ನು ಪ್ರಧಾನಿ ಮೋದಿಗೆ ಮಾರಿದ್ದಾರೆ. ನಜೀಬ್ ಅವರು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಇಡುವ ಹೆಜ್ಜೆಯಂತೆಯೇ ನಡೆಯುತ್ತಿದ್ದಾರೆ. ಹೀಗಾಗಿಯೇ ಹಿಟ್ಲರ್ ನಂತೆ ವರ್ತಿಸುತ್ತಿದ್ದಾರೆ. ನಜೀಬ್ ಅವರು ಏನೇ ಮಾಡಲಿ, ಯಾವುದೇ ಕೆಲವನ್ನೇ ಮಾಡಲು ಅದು ಲೆಕ್ಕಕ್ಕೆ ಬರುವುದಿಲ್ಲ. ಪ್ರಧಾನಿ ಮೋದಿಯವರು ಎಂದಿಗೂ ಮುಸ್ಲಿಮರು ಭಾರತದ ಉಪರಾಷ್ಟ್ರಪತಿಯಾಗಲು ಬಿಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಕೇಜ್ರಿವಾಲ್ ಅವರ ಈ ಹೇಳಿಕೆಗೆ ಟ್ವಿಟರ್ ನಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದ್ದು, ಕೇಜ್ರಿವಾಲ್ ಅವರು ಕೋಮು ರಾಜಕೀಯವನ್ನು ಮಾಡುತ್ತಿದ್ದಾರೆಂದು ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಕೇಜ್ರಿವಾಲ್ ಅವರೇ ಗಜಿನಿ ಚಿತ್ರದ ಅಮಿರ್ ಆಗಿಬಿಟ್ಟಿದ್ದೀರಾ ಹೇಗೆ? ಇತಿಹಾಸವನ್ನು ಓದಿ…ಇತಿಹಾಸವನ್ನು ಮರೆತಿದ್ದೀರಾ…? ಅಬ್ದುಲ್ ಕಲಾಂ ಅವರು ಉನ್ನತ ಸ್ಥಾನಕ್ಕೇರುವಂತೆ ಮಾಡಿದ್ದು ಬಿಜೆಪಿ ಎಂದು ಸುಧೇಸ್ ಎಂಬುವವರು ಪ್ರತಿಕ್ರಿಯೆ ನೀಡಿದ್ದಾರೆ.
ನೋಟು ನಿಷೇಧದ ಹಂಗಾಮಾ ಮುಗಿಯಿತೇ? ಇದೀಗ ಮತ್ತೆ ಮೋದಿ, ಜಂಗ್, ಹಿಂದೂ, ಮುಸ್ಲಿಂ, ದಲಿತ ವಿಚಾರಕ್ಕೆ ಬಂದಿದ್ದೀರಾ? ಎಂದು ಮತ್ತೊಬ್ಬ ವ್ಯಕ್ತಿ ಪ್ರತಿಕ್ರಿಯೆ ನೀಡಿದ್ದಾರೆ.

Comments are closed.