ರಾಷ್ಟ್ರೀಯ

ಬ್ಯಾಂಕ್ ಕ್ಯೂನಲ್ಲಿ ಜನಿಸಿದ್ದ ಮಗುವಿನ ಹೆಸರು ಖಜಾಂಚಿ ನಾಥ್ 

Pinterest LinkedIn Tumblr

sarveshaಕಾನ್ಪುರ: ನೋಟ್ ನಿಷೇಧದ ನಂತರ ಹಣ ಡ್ರಾ ಮಾಡಲು ಉತ್ತರ ಪ್ರದೇಶದ ದೆಹಾತ್ ಜಿಲ್ಲೆಯ ಬ್ಯಾಂಕ್‍ ನಲ್ಲಿ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದ ವೇಳೆಯೇ ಗರ್ಭಿಣಿಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದರು. ತಾಯಿ, ಮಗು ಇಬ್ಬರು ಆರೋಗ್ಯವಾಗಿದ್ದು, ಈಗ ಆ ಮಗವಿಗೆ ಖಜಾಂಚಿ(ಕ್ಯಾಷಿಯರ್) ಎಂದು ನಾಮಕರಣ ಮಾಡಲಾಗಿದೆ.
ಕಳೆದ ಶುಕ್ರವಾರ ತಮ್ಮ ಅತ್ತೆಯೊಂದಿಗೆ ಬ್ಯಾಂಕ್‍ಗೆ ಬಂದಿದ್ದ ಸರ್ವೇಶಾ ದೇವಿ ಎಂಬ ಮಹಿಳೆ ಬ್ಯಾಂಕ್ ಆವರಣದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಬ್ಯಾಂಕ್ ಬಳಿ ಆ್ಯಂಬುಲೆನ್ಸ್ ಬರಲು ಕಷ್ಟವಾಗಿದ್ದರಿಂದ ಪೊಲೀಸರೇ ಮಹಿಳೆ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಬ್ಯಾಂಕ್ ನಲ್ಲಿ ಹುಟ್ಟಿ ಬದುಕುಳಿದ ಮಗುವಿಗೆ ನಾವು ಖಜಾಂಚಿ ಎಂದು ನಾಮಕರಣ ಮಾಡಿದ್ದೇವೆ ಎಂದು ಅವರ ಚಿಕ್ಕಪ್ಪ ಅನಿಲ್ ನಾಥ್ ಅವರು ಹೇಳಿದ್ದಾರೆ.
ಸರ್ವೇಶಾಳ ಪತಿ ಈ ವರ್ಷಾರಂಭಕ್ಕೆ ಅಪಘಾತವೊಂದರಲ್ಲಿ ಸಾವಿಗೀಡಾಗಿದ್ದರು. ಹಾಗಾಗಿ ಸರ್ಕಾರದಿಂದ ಸಿಗುವ ಪರಿಹಾರ ಧನವನ್ನು ಪಡೆಯಲು ಆಕೆ ಬ್ಯಾಂಕ್ ‍ಗೆ ಬಂದಿದ್ದಳು.

Comments are closed.