ರಾಷ್ಟ್ರೀಯ

ನೋಟು ನಿಷೇಧ: ವಿಚಾರಣೆಯನ್ನು ಮುಂದೂಡಿದ ಸುಪ್ರೀಂ ಕೋರ್ಟ್

Pinterest LinkedIn Tumblr

suprim_court_news_photoನವದೆಹಲಿ (ಡಿ.5): ಕೇಂದ್ರ ಸರ್ಕಾರ ಕೈಗೊಂಡಿರುವ ನೋಟು ಅಮಾನ್ಯ ಕ್ರಮದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಡಿಸೆಂಬರ್ 9ಕ್ಕೆ ಮುಂದೂಡಿದೆ.
ಕೇಂದ್ರ ಸರ್ಕಾರ ನೋಟು ಅಮಾನ್ಯ ಮಾಡಿರುವ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್’ನಲ್ಲಿ ದಾವೆ ದಾಖಲಾಗಿದೆ.
ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ಸುಪ್ರೀಂ ಕೋರ್ಟ್ ಕಳೆದ ವಿಚಾರಣೆಗಳ ಸಂದರ್ಭದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
“ಇದು ನಿಜಕ್ಕೂ ಗಂಭೀರವಾದುದು. ಇದು ಪರಿಗಣಿಸಲೇಬೇಕಾಗುವಂಥದ್ದು. ಜನರು ತೊಂದರೆಯಾಗಿದೆ. ಅವರು ಹತಾಶರಾಗಿದ್ದಾರೆ. ಗಲಭೆಯಾದರೂ ಆಗಬಹುದು” ಎಂದು ಮುಖ್ಯನ್ಯಾಯಮೂರ್ತಿ ಟಿಎಸ್ ಠಾಕೂರ್ ಮತ್ತು ನ್ಯಾ| ಅನಿಲ್ ಆರ್.ದಾವೆ ನ್ಯಾಯಪೀಠವು ಸರ್ಕಾರವನ್ನು ಎಚಚರಿಸಿತ್ತು.
500 ಮತ್ತು 1000 ರೂಪಾಯಿ ನೋಟುಗಳ ರದ್ದತಿಯನ್ನು ಪ್ರಶ್ನಿಸಿ ದೇಶದ ವಿವಿಧ ಕೋರ್ಟ್ಗಳಲ್ಲಿ ಹೂಡಲಾಗಿರುವ ಪ್ರಕರಣಗಳಿಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು.

Comments are closed.