ರಾಷ್ಟ್ರೀಯ

ಇಂದಿನಿಂದ ಗೋವಾ ಯುವಜನರಿಗೆ ಉಚಿತ ಇಂಟರ್ನೆಟ್

Pinterest LinkedIn Tumblr

social_icons_6_on_mobile_smartphone_0ಪಣಜಿ: ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ಗೋವಾ ರಾಜ್ಯ ಸರ್ಕಾರ ಹೊಸ ಯೋಜನೆಯೊಂದಕ್ಕೆ ನಾಳೆ ಚಾಲನೆ ನೀಡಲಿದೆ.

ಗೋವಾ ಯುವ ಸಂಚಾರ್ ಯೋಜನಾ ಎಂಬ ಯೋಜನೆಗೆ ಸೋಮವಾರ ಚಾಲನೆ ಸಿಗಲಿದ್ದು, ರಾಜ್ಯದಲ್ಲಿರುವ ಯುವ ಜನತೆಗೆ ( 16 -30 ವರ್ಷದೊಳಗಿನವರು) ಪ್ರತಿ ತಿಂಗಳು ಉಚಿತ ಸಿಮ್ ಕಾರ್ಡ್, 100 ನಿಮಿಷ ಟಾಕ್ ಟೈಮ್ ಮತ್ತು 3 ಜಿಬಿ ಇಂಟರ್ನೆಟ್ ಡೇಟಾ ಉಚಿತವಾಗಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಹೇಳಿದ್ದಾರೆ.

ರಾಜ್ಯದಲ್ಲಿ ಸರಿ ಸುಮಾರು 1.25 ಲಕ್ಷ ಯುವ ಜನರು ಇದ್ದಾರೆ. ಇವರಿಗೆ ಈ ಯೋಜನೆ ಸಹಾಯವಾಗಲಿದ್ದು. ಇದಕ್ಕಾಗಿ ಖಾಸಗಿ ಮೊಬೈಲ್ ಸಂಸ್ಥೆ ವೊಡಾಫೋನ್ ಜತೆ ಕೈಜೋಡಿಸಿದ್ದೇವೆ ಎಂದಿದ್ದಾರೆ ಪರ್ಸೇನರ್.

ಈ ಯೋಜನೆ ಜಾರಿ ಮಾಡಲು ನವೆಂಬರ್ 25ರಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು.

ಒಂದು ವೇಳೆ ಈ ಯೋಜನೆ ಫಲಾನುಭಾವಿಗಳು ದುರ್ಬಳಕೆ ಮಾಡಿಕೊಂಡರೆ, ಯೋಜನೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಹೇಳಿದ್ದಾರೆ.

Comments are closed.