ರಾಷ್ಟ್ರೀಯ

ಶೀಘ್ರದಲ್ಲೇ ರೂ. 50, ರೂ. 20 ಹೊಸ ನೋಟು ಮುದ್ರಣ: ಹಳೆ ನೋಟುಗಳು ನಿಷೇಧಿಸಲಿವೆಯೇ?

Pinterest LinkedIn Tumblr

rbiನವದೆಹಲಿ: ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ಎದುರಾಗಿರುವ ಹಣದ ಸಮಸ್ಯೆಯನ್ನು ಬಗೆಹರಿಸುವುದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ ₹20 ಮತ್ತು ₹50 ನೋಟುಗಳನ್ನು ಮುದ್ರಿಸಲಿದೆ.

ಶೀಘ್ರದಲ್ಲೇ ₹20ರ ಹೊಸ ನೋಟುಗಳನ್ನು ಆರ್‍ ಬಿ ಐ ಮುದ್ರಿಸಲಿದ್ದು ಇದರಲ್ಲಿ ಮಹಾತ್ಮ ಗಾಂಧಿ ಸೀರೀಸ್ 2005, ಎರಡೂ ಸಂಖ್ಯಾ ಪ್ಯಾನಲ್‍ಗಳಲ್ಲಿ ‘L’ ಎಂಬ ಇನ್ಸೆಟ್ ಲೆಟರ್, ಆರ್ ಬಿ ಐ ಗವರ್ನರ್ ಡಾ. ಉರ್ಜಿತ್ ಪಟೇಲ್ ಅವರ ಹಸ್ತಾಕ್ಷರವಿದ್ದು, ಮುದ್ರಣ ಇಸವಿ 2016 ಎಂದು ಅಚ್ಚಾಗಿರುತ್ತದೆ ಎಂದು ಆರ್ ಬಿ ಐ ಪ್ರಕಟಣೆಯಲ್ಲಿ ತಿಳಿಸಿದೆ.

ಅದೇ ರೀತಿ ₹50ರ ಹೊಸ ನೋಟುಗಳನ್ನೂ ಮುದ್ರಿಸಲಾಗುತ್ತಿದ್ದು ಅದರಲ್ಲಿ ಮಹಾತ್ಮ ಗಾಂಧಿ ಸೀರೀಸ್ 2005, ಎರಡೂ ಸಂಖ್ಯಾ ಪ್ಯಾನಲ್‍ಗಳಲ್ಲಿ ಯಾವುದೇ ಇನ್ಸೆಟ್ ಲೆಟರ್ ಇರುವುದಿಲ್ಲ. ನೋಟುಗಳಲ್ಲಿ ಆರ್ ಬಿ ಐ ಗವರ್ನರ್ ಡಾ. ಉರ್ಜಿತ್ ಪಟೇಲ್ ಅವರ ಹಸ್ತಾಕ್ಷರವಿದ್ದು, ಮುದ್ರಣ ಇಸವಿ 2016 ಎಂದಿರುತ್ತದೆ.

Comments are closed.