ರಾಷ್ಟ್ರೀಯ

ಪಿಂಚಣಿದಾರರಿಗೆ 2 ರೂ. ನಾಣ್ಯ ಚಿಲ್ಲರೆ ಕೊಟ್ಟ ಬ್ಯಾಂಕ್

Pinterest LinkedIn Tumblr

pensionಪಂಜಾಬ್: ನಗದು ಕೊರತೆಯಿಂದಾಗಿ ಜಲಂದರ್ ಬ್ಯಾಂಕ್‍ನಲ್ಲಿ ಪಿಂಚಣಿದಾರರಿಗೆ 2 ರೂಪಾಯಿ ನಾಣ್ಯಗಳನ್ನು ಕೊಡಲಾಗುತ್ತಿದೆ.

ಗುರುವಾರ ಪಿಂಚಣಿ ಪಡೆಯಲು ಬ್ಯಾಂಕ್‍ಗೆ ಬಂದ ವ್ಯಕ್ತಿಗಳಿಗೆ ₹10,000 ಹಣವನ್ನು ಬ್ಯಾಂಕ್ ನೀಡಿದೆ. ಇದರಲ್ಲಿ ₹9000 ಹಣವನ್ನು ನೋಟುಗಳಲ್ಲಿ ನೀಡಿದರೆ ಬಾಕಿ ಉಳಿದ ₹1000 ಮೌಲ್ಯದ ದುಡ್ಡನ್ನು 2 ರೂಪಾಯಿ ನಾಣ್ಯ ನೀಡಿ ತೃಪ್ತಿ ಪಡಿಸಿದೆ.

ಚಿಲ್ಲರೆ ನಾಣ್ಯ ಕೈಯಲ್ಲಿ ಹಿಡಿದುಕೊಂಡು ಹೊರ ಬರುತ್ತಿದ್ದ ಪಿಂಚಣಿದಾರರೊಬ್ಬರು. ಈ ನಾಣ್ಯಗಳನ್ನು ನಾನೇನು ಮಾಡಲಿ?
ಈಗ ಮಕ್ಕಳು ಕೂಡಾ ಎರಡು ರೂಪಾಯಿ ನಾಣ್ಯವನ್ನು ಸ್ವೀಕರಿಸುತ್ತಿಲ್ಲ, ಇದನ್ನು ತೆಗೆದುಕೊಂಡು ಹೋಗಿ ಮಾಡುವುದಾದರೂ ಏನು? ಸರ್ಕಾರವೇ ನಮ್ಮನ್ನು ಈ ಸ್ಥಿತಿಗೆ ದೂಡಿದೆ ಎಂದು ರೋದಿಸಿದ್ದಾರೆ.

ಹೆಚ್ಚಿನ ಬ್ಯಾಂಕ್‍ಗಳಲ್ಲಿ ನಗದು ಇಲ್ಲದೇ ಇರುವ ಕಾರಣ ಪಿಂಚಣಿದಾರರಿಗೆ ಸರಿಯಾಗಿ ದುಡ್ಡೇ ಸಿಗುತ್ತಿಲ್ಲ.

Comments are closed.