ರಾಷ್ಟ್ರೀಯ

ಪ್ರಧಾನಿ ಮೋದಿ ಆಪ್‍ನ್ನು ಹ್ಯಾಕ್ ಮಾಡಿದ ಯುವಕ ಹೇಳಿದ್ದೇನು…?

Pinterest LinkedIn Tumblr

javed

ಮುಂಬೈ: ಎರಡು ದಿನಗಳ ಹಿಂದೆಯಷ್ಠೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವಿಟರ್ ಖಾತೆ ಹ್ಯಾಕ್‍ಗೊಂಡ ಬೆನ್ನಲ್ಲೇ ಇದೀಗ ಪ್ರಧಾನಿ ಮೋದಿ ಆಪ್‍ನ್ನು ಹ್ಯಾಕ್ ಮಾಡಿದ್ದಾಗಿ ಯುವಕನೊಬ್ಬ ಹೇಳಿದ್ದಾನೆ.

22 ವರ್ಷದ ಮುಂಬೈನ ಜಾವೇದ್ ಖಾತ್ರಿ, ತಾನು ಪ್ರಧಾನಿ ನರೇಂದ್ರ ಮೋದಿಯವರ ಮೊಬೈಲ್ ಆಪ್‍ನ್ನು ಹ್ಯಾಕ್ ಮಾಡಿದ್ದೆ. ಆದರೆ ಇದರ ಹಿಂದೆ ಯಾವುದೇ ದುರುದ್ದೇಶವಿರಲಿಲ್ಲ, ಬದಲಾಗಿ ಮೋದಿ ಆಪ್‍ನ ಭದ್ರತಾ ಲೋಪದೋಷಗಳನ್ನ ಬಹಿರಂಗಪಡಿಸೋದಕ್ಕಾಗಿ ಹ್ಯಾಕ್ ಮಾಡಿದ್ದೆ ಎಂದು ಜಾವೇದ್ ಸ್ಪಷ್ಟಪಡಿಸಿದ್ದಾನೆ.

ಈ ನಡುವೆ ಮೋದಿ ಆಪ್‍ನ ಭದ್ರತಾ ಲೋಪವನ್ನ ಪತ್ತೆಹಚ್ಚಿದ್ದಕ್ಕೆ ಬಿಜೆಪಿ ಜಾವೇದ್‍ಗೆ ಧನ್ಯವಾದ ತಿಳಿಸಿದ್ದು, ಆಪ್‍ನ ಭದ್ರತೆ ಸುಧಾರಿಸಲು ಬೇಕಾದ ಸಲಹೆಗಳನ್ನ ಮುಕ್ತವಾಗಿ ಪಡೆಯಲು ಸಿದ್ದವಿರೋದಾಗಿ ಹೇಳಿದೆ.

ಜಾವೇದ್ ಮುಂಬೈನ ಘಟ್ಕೋಪರ್ ಪ್ರದೇಶವೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಮೋದಿ ಆಪ್ ಹ್ಯಾಕ್ ಮಾಡುತ್ತಿದ್ದಂತೆಯೇ ಮಾಧ್ಯಮಗಳು ಆತನನ್ನು ಸಂಪರ್ಕಿಸಿದ್ದು, ಈ ವೇಳೆ ಆತ ಆಪ್ ಹ್ಯಾಕ್ ಮಾಡಿರುವ ಉದ್ದೇಶದ ಬಗ್ಗೆ ವಿವರಿಸಿದ್ದಾನೆ.

Comments are closed.