ರಾಷ್ಟ್ರೀಯ

ಜಿಯೋ ಗ್ರಾಹಕರಿಗೆ ಶಾಕ್ ! ಉಚಿತ ಸೇವೆ ಡಿ. 3ಕ್ಕೆ ಸ್ಥಗಿತ

Pinterest LinkedIn Tumblr

jio-sim-card

ನವದೆಹಲಿ: ದೇಶಾದ್ಯಂತ ರಿಲಯನ್ಸ್ ಕಂಪನಿ ನೀಡಿದ್ದ ಜಿಯೋ ಸಿಮ್ ಮೂಲಕ ಉಚಿತ 4ಜಿ ಅಂತರ್ಜಾಲ ಸೇವೆ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಜಿಯೋ ಸಿಮ್ ಡಿಸೆಂಬರ್ 3ರಂದು ಉಚಿತ ಸೇವೆಯನ್ನು ಸ್ಥಗಿತಗೊಳಿಸಲಿದೆ ಎಂದು ಹೇಳುವ ಮೂಲಕ ಗ್ರಾಹಕರಿಗೆ ಅಚ್ಚರಿ ಮೂಡಿಸಿದೆ.

ಸೆಪ್ಟೆಂಬರ್ 5ರಿಂದ ಜಿಯೋ ಉಚಿತ ಅಂತರ್ಜಾಲ ಹಾಗೂ ಕರೆ ಮಾಡುವ ಸೇವೆ ನೀಡಲು ಆರಂಭಿಸಿತ್ತು, ಡಿಸೆಂಬರ್ 31ರಂದು ಜಿಯೋ ಸೇವೆ ಅಂತ್ಯವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಟೆಲಿಕಾಮ್ ಕಂಪನಿಗಳ ನಿಯಂತ್ರಣ ಸಂಸ್ಥೆ ಟ್ರಯೋ ನಿಯಮದಂತೆ ಇದು ಸಾಧ್ಯವಿಲ್ಲ. ಪ್ರಚಾರದ ಸಲುವಾಗಿ ನೀಡಿರುವ ಆಫರ್‌ಗಳು 90 ದಿನಗಳ ನಂತರ ಮುಂದವರಿಸುವಂತಿಲ್ಲ, ಆದ್ದರಿಂದ ಜಿಯೋ ಆರಂಭಿಕ ಆಫರ್ ಡಿ.3ಕ್ಕೆ ಅಂತ್ಯವಾಗಲಿದೆ.

Comments are closed.