ರಾಷ್ಟ್ರೀಯ

ಶತ್ರು ಗುಂಡಿಗಿಂತ ಅನಾರೋಗ್ಯದಿಂದ ಸೈನಿಕರ ಸಾವೇ ಹೆಚ್ಚು

Pinterest LinkedIn Tumblr

indian-armyನವದೆಹಲಿ: ದೇಶದ ಗಡಿ ಕಾಯುತ್ತಿರುವ ಮತ್ತು ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಬಿಎಸ್ಎಫ್ ಯೋಧರು ವೈರಿಗಳ ಗುಂಡೇಟಿಗಿಂತಲೂ ಹೆಚ್ಚಾಗಿ ಅನಾರೋಗ್ಯದಿಂದ ಸಾಯುತ್ತಿದ್ದಾರೆ ಎಂಬುದು ಬಿಎಸ್ಎಫ್ ಬಿಡುಗಡೆ ಮಾಡಿದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಕಳೆದ 2 ವರ್ಷಗಳ ಮಾಹಿತಿಯನ್ನು ಆಧರಿಸಿ ವರದ ಸಿದ್ದಪಡಿಸಲಾಗಿದೆ. ಈ ವರದಿಯ ಪ್ರಕಾರ ಜನವರಿ 2015ರಿಂದ ಸೆಪ್ಟೆಂಬರ್ 2016ರವೆಗೆ ಒಟ್ಟು 744 ಯೋಧರು ಮೃತರಾಗಿದ್ದಾರೆ. ಇದರಲ್ಲಿ 25 ಜನರು ಮಾತ್ರ ವೈರಿಗಳ ಗುಂಡೇಟಿಗೆ ಸಿಲುಕಿ ಮೃತರಾಗಿದ್ದು, 316 ಯೋಧರು ಅನಾರೋಗ್ಯದ ಕಾರಣದಿಂದ ಸಾವನ್ನಪ್ಪಿದ್ದಾರೆ. ಅದರಲ್ಲೂ 117 ಯೋಧರು ಹೃದಯಾಘಾತಕ್ಕೆ ಒಳಗಾಗಿ ಅಸು ನೀಗಿದ್ದಾರೆ.

ಆದರೆ ಈ ಅವಧಿಯಲ್ಲಿ ಎಚ್ಐವಿ ಮತ್ತು ಮಲೇರಿಯಾದಿಂದ ಮೃತರಾದ ಯೋಧರ ಸಂಖ್ಯೆ ಕಡಿಮೆಯಾಗಿದೆ. ಆದರೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 192 ಇದೆ. ಬಿಎಸ್ಎಫ್ ಯೋಧರ ಆರೋಗ್ಯ ವೃದ್ಧಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅವರು ಕೆಲಸ ಮಾಡುವ ವಾತಾವರಣವನ್ನು ಮತ್ತಷ್ಟು ಆರೋಗ್ಯಕರಗೊಳಿಸಲಾಗುವುದು ಎಂದು ಬಿಎಸ್ಎಫ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.