ರಾಷ್ಟ್ರೀಯ

ಕಪ್ಪು ಹಣವನ್ನು ಬಿಳಿಯಾಗಿಸಲು ಬೆಳ್ಳಿ ಮೊರೆ ಹೋದ ಕಾಳಧನಿಕರು

Pinterest LinkedIn Tumblr

silverbarcoin

ಸೇಲಂ: 500 ಹಾಗೂ 1000 ರು ನೋಟು ನಿಷೇಧದ ನಂತರ ಕಪ್ಪು ಹಣವನ್ನು ಬಿಳಿಯಾಗಿಸಲು ಹರಸಾಹಸ ಪಡುತ್ತಿರುವ ಕಾಳ ಧನಿಕರು ಚಿನ್ನ ಖರೀದಿ ಸುರಕ್ಷಿತವಲ್ಲ ಎಂಬ ದೃಷ್ಠಿಯಿಂದ ಬೆಳ್ಳಿ ಖರೀದಿಗೆ ಮುಗಿಬಿದ್ದಿದ್ದಾರೆ.

ನವೆಂಬರ್ 8 ಮಧ್ಯರಾತ್ರಿಯಿಂದ ನೋಟುಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದ ಮೇಲೆ ಕಪ್ಪು ಹಣ ಹೊಂದಿರುವವರು ಅಧಿಕ ಬೆಲೆ ನೀಡಿ ಬೆಳ್ಳಿ ಖರೀದಿಸುತ್ತಿದ್ದಾರೆ.

ಸೇಲಂ, ಧರ್ಮಪುರಿ, ನಾಮಕ್ಕಲ್, ಕೃಷ್ಣಗಿರಿ, ಈರೋಡ್, ತಿರುಪುರ್, ಕೊಯಂಬತ್ತೂರು ಹಾಗೂ ನೀಲಗಿರಿ ಜಿಲ್ಲೆಗಳಲ್ಲಿ ಜನ ಚಿನ್ನ ಖರೀದಿಗೆ ಬದಲು ಬೆಳ್ಳಿ ಖರೀದಿಸುತ್ತಿದ್ದಾರೆ.

ಅದರಲ್ಲೂ ಕಪ್ಪು ಹಣ ಹೊಂದಿರುವವರು ಹಳೇಯ 500 ಹಾಗೂ ಸಾವಿರ ರು ನೋಟು ನೀಡಿ ಬೆಳ್ಳಿ ಖರೀದಿಸುತ್ತಿದ್ದಾರೆ. ಹೀಗಾಗಿ ಬೆಳ್ಳಿ ವ್ಯಾಪಾರ ಜೋರಾಗಿದೆ. ಸುಮಾರು 1 ಸಾವಿರಕ್ಕೂ ಹೆಚ್ಚಿನ ಅಂಗಡಿಗಳಲ್ಲಿ ಬೆಳ್ಳಿ ವ್ಯಾಪಾರ ಜೋರಾಗಿದೆ.

ಹಣ ನಿಷೇದಿಸಿದ ಕೆಲವು ದಿನ ಚಿನ್ನದ ವ್ಯಾಪಾರ ಜೋರಾಗಿತ್ತು, ಆದರೆ ಚಿನ್ನದ ಮೇಲೂ ಸರ್ಕಾರ ಕಣ್ಣಿಟ್ಟಿದೆ ಎಂಬ ಮಾಹಿತಿ ಎಲ್ಲೆಡೆ ಹಬ್ಬುತ್ತಿದ್ದಂತೆ ಬೆಳ್ಳಿ ಖರೀದಿಗೆ ಜನ ಮುಂದಾಗಿದ್ದಾರೆ ಎಂದು ಬೆಳ್ಳಿ ಅಂಗಡಿ ಮಾಲೀಕರೊಬ್ಬರು ತಿಳಿಸಿದ್ದಾರೆ.

Comments are closed.