ರಾಷ್ಟ್ರೀಯ

ಸೋಲಾರ್ ಸ್ಥಾವರ ನಿರ್ಮಾಣಕ್ಕಾಗಿ ಅದಾನಿ ಗ್ರೂಫ್ ನಿಂದ 300 ಮಿಲಿಯನ್ ಡಾಲರ್ ಹೂಡಿಕೆ

Pinterest LinkedIn Tumblr

adaniಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಎರಡು ಸೋಲಾರ್ ಸ್ಥಾವರಗಳಿಗೆ ಭಾರತೀಯ ಉದ್ಯಮ ಸಂಸ್ಥೆ ಅದಾನಿ ಗ್ರೂಪ್ ಸುಮಾರು 400 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ.

ಐದು ವರ್ಷ ತಗುಲುವ ಈ ಸ್ಥಾವರದಿಂದ ದೇಶದಲ್ಲಿ 1500 ಮೆ.ವ್ಯಾ ಸೋಲಾರ್ ವಿದ್ಯುತ್ ಉತ್ಪಾದಿಸುವ ಯೋಜನೆಯಿದೆ. ಭಾರತದ ಅತಿ ದೊಡ್ಡ ಸೋಲಾರ್ ವಿದ್ಯುತ್ ಉತ್ಪಾದಕ ಮತ್ತು ಪ್ರಮುಖ ಕಲ್ಲಿದ್ದಲು ದಹಿಸುವ ಜನರೇಟರ್ ಆಗಿರುವ ಅದಾನಿ ಗ್ರೂಪ್, ಪೂರ್ವ ಆಸ್ಟ್ರೇಲಿಯಾದಲ್ಲಿ ಮೋರಾನ್ಬಾದಲ್ಲಿ 100 ರಿಂದ 200 ಮೆ.ವ್ಯಾ ಸೋಲಾರ್ ಘಟಕ ಸ್ಥಾಪಿಸುವ ಯೋಜನೆಯಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸ್ಥಾವರ ಸಂಬಂಧಿತ ಕಾಮಗಾರಿಯು, 2017 ರ ಮಧ್ಯಭಾಗದಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಇನ್ನೊಂದು ಸ್ಥಾವರವನ್ನು ದಕ್ಷಿಣ ಆಸ್ಟ್ರೇಲಿಯಾದ ವ್ಹೈಲ್ಲಾದಲ್ಲಿ ಸ್ಥಾಪಿಸಲಾಗುವುದು. ಇದು 120-150 ಮೆ.ವ್ಯಾ ಸಾಮರ್ಥ್ಯದ್ದಾಗಿದ್ದು, 2017 ರ ಅಂತ್ಯದಲ್ಲಿ ಕಾರ್ಯಾರಂಭಗೊಳ್ಳುವುದು ಎಂದು ಅದಾನಿ ಅವರು ವಿವರ ನೀಡಿದರು.

Comments are closed.