ರಾಷ್ಟ್ರೀಯ

ಹಳೆ ನೋಟುಗಳು ಆರ್‌ಬಿಐ ಕೌಂಟರ್‌ಗಳಲ್ಲಿ ಮಾತ್ರ ವಿನಿಮಯ

Pinterest LinkedIn Tumblr

noteನವದೆಹಲಿ : ರದ್ದಾಗಿರುವ ಹಳೆಯ ₹500, ಮತ್ತು ₹ 1,000 ಮುಖಬೆಲೆಯ ಹಳೆ ನೋಟುಗಳನ್ನು ಇನ್ನು ಮುಂದೆ ಆರ್‌ ಬಿ ಐ ಕೌಂಟರ್‌ಗಳಲ್ಲಿ ಮಾತ್ರ ವಿನಿಮಯ ಮಾಡಿಕೊಳ್ಳಬಹುದು ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಸಾರ್ವಜನಿಕರು ತಮ್ಮಲ್ಲಿರುವ ರದ್ದಾದ ಹಳೆಯ ನೋಟುಗಳನ್ನು ಆರ್‌ಬಿಐ ತೆರೆದಿರುವ ಆಯ್ದ ಕೌಂಟರ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು.
ಹಳೆಯ ನೋಟುಗಳನ್ನು ಗುರುವಾರ ಮಧ್ಯರಾತ್ರಿಯ ಬಳಿಕ ವಾಣಿಜ್ಯ ಬ್ಯಾಂಕುಗಳಲ್ಲಿ ವಿನಿಮಯ ಮಾಡುವಂತಿಲ್ಲ, ಆದರೆ ಆ ನೋಟುಗಳನ್ನು ತಮ್ಮ ಖಾತೆಗೆ ಜಮೆ ಮಾಡಬಹುದು ಎಂದು ಸರಕಾರ ನಿನ್ನೆ ಹೊರಡಿಸಿದ್ದ ಪ್ರಕಟಣೆಯಲ್ಲಿ ತಿಳಿಸಿತ್ತು.

Comments are closed.