ರಾಷ್ಟ್ರೀಯ

ದೇಶದ ಇತಿಹಾಸದಲ್ಲಿಯೇ ಇದು ಪ್ರಥಮ: ಎಲ್ ಅಂಡ್ ಟಿ ಸಂಸ್ಥೆಯಿಂದ 14 ಸಾವಿರ ಉದ್ಯೋಗಿಗಳ ವಜಾ

Pinterest LinkedIn Tumblr

l-and-t-infotec-puneಮುಂಬೈ(ನ. 23): ಭಾರತದ ಅಗ್ರಗಣ್ಯ ಎಂಜಿನಿಯರಿಂಗ್ ಸಂಸ್ಥೆ ಲಾರ್ಸನ್ ಅಂಡ್ ಟೌಬ್ರೋ (L&T) ತನ್ನ 14 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. ಸಂಸ್ಥೆಯ 11.2% ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಎಲ್ ಅಂಡ್ ಟಿ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೆಲಸ ಕಳೆದುಕೊಂಡಿರುವುದು ಇದೇ ಮೊದಲು. ಅಷ್ಟೇ ಅಲ್ಲ, ಭಾರತದ ಕಾರ್ಪೊರೇಟ್ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಮೊತ್ತದ ಉದ್ಯೋಗ ನಷ್ಟ ಪ್ರಕರಣಗಳಲ್ಲೊಂದೆನ್ನಲಾಗಿದೆ.
ವ್ಯವಹಾರ ಕುಸಿತ, ಹೆಚ್ಚುತ್ತಿರುವ ಸ್ಪರ್ಧೆ, ತೈಲ ಬೆಲೆ ಇಳಿಕೆಯಿಂದ ಕೈತಪ್ಪಿದ ಯೋಜನೆಗಳು ಹಾಗೂ ಆಂತರಿಕ ಡಿಜಿಟಲೀಕರಣ ಮೊದಲಾದ ಕಾರಣಗಳಿಂದಾಗಿ ಎಲ್ ಅಂಡ್ ಟಿ ಈ ಕಠಿಣ ಕ್ರಮ ಕೈಗೊಂಡಿದೆ.
ಎಲ್ ಅಂಡ್ ಟಿ ಸಂಸ್ಥೆಯ ವ್ಯವಹಾರವು ಕಳೆದ ವರ್ಷ ಶೇ.8.6ರಷ್ಟು ಹೆಚ್ಚಳವಾಗಿ 46,885 ಕೋಟಿ ರೂಪಾಯಿ ತಲುಪಿತ್ತು. ಅದರ ಲಾಭವು 1,197 ಕೋಟಿಯಿಂದ 2,044 ಕೋಟಿ ರೂ.ಗೆ ಹೆಚ್ಚಾಯಿತು. ಆದರೆ, ಮುಂದಿನ 5 ವರ್ಷಗಳಲ್ಲಿ ಸಂಸ್ಥೆ ತನ್ನ ವ್ಯವಹಾರವನ್ನು 2 ಲಕ್ಷ ಕೋಟಿಗೆ ಹೆಚ್ಚಿಸಿಕೊಳ್ಳುವ ಗುರಿಯನ್ನು ಇಟ್ಟುಕೊಂಡಿದೆ. ಸಂಸ್ಥೆಯ ಎಲ್ಲಾ ಘಟಕ ಹಾಗೂ ವಿಭಾಗಗಳಲ್ಲಿ ಅನಗತ್ಯ ಉದ್ಯೋಗಗಳನ್ನು ಮೊಟಕುಗೊಳಿಸಿ ಆದಾಯ ಹೆಚ್ಚಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಒಟ್ಟು 14 ಸಾವಿರ ಉದ್ಯೋಗಿಗಳನ್ನು ಕೈಬಿಡುವುದು ಈ ಯೋಜನೆಯ ಒಂದು ಭಾಗವಾಗಿದೆ ಎನ್ನಲಾಗಿದೆ. ಜೊತೆಗೆ, ಹೆಚ್ಚು ಲಾಭ ತರದ ಸಂಸ್ಥೆಯ ಘಟಕಗಳ ಹಣೆಬರಹವನ್ನು ಇನ್ನೆರಡು ವರ್ಷದಲ್ಲಿ ನಿರ್ಧರಿಸುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಎಲ್ ಅಂಡ್ ಟಿ ಸಂಸ್ಥೆಯಲ್ಲಿ ಶಾಕ್’ಗಳು ಹೊಡೆಯುವುದು ನಿರೀಕ್ಷಿತವೆನಿಸಲಿವೆ.

Comments are closed.