ರಾಷ್ಟ್ರೀಯ

22 ವರ್ಷಗಳ ಹಿಂದೆ ವ್ಯಕ್ತಿಯೊಬ್ಬನ ದೇಹದೊಳಗೆ ಹೊಕ್ಕಿದ್ದ ಸೂಜಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾದ ವೈದ್ಯರು !

Pinterest LinkedIn Tumblr

operation

ತಿರುವನಂತಪುರಂ : ಅತೀ ವಿರಳ ಮತ್ತು ಸವಾಲಿನ ಘಟನೆಯೊಂದರಲ್ಲಿ ಇಲ್ಲಿನ ಆಸ್ಪತ್ರೆಯೊಂದರ ವೈದ್ಯರು ವ್ಯಕ್ತಿಯೊಬ್ಬನ ದೇಹದೊಳಗೆ 22 ವರ್ಷಗಳ ಹಿಂದೆ ಹೊಕ್ಕಿದ್ದ ಸೂಜಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಿರಣ್‌ ಕುಮಾರ್‌ ಎಂಬ 34 ವರ್ಷದ ಎನ್ನುವವರು 12 ವರ್ಷದವರಿದ್ದಾಗ ಆಕಸ್ಮಿಕವಾಗಿ ಸೂಜಿಯೊಂದು ಹೊಟ್ಟೆಯನ್ನು ಸೇರಿತ್ತು. ಕೂಡಲೇ ಮನೆಯವರು ಆಸ್ಪತ್ರೆಗೆ ಧಾವಿಸಿ ಪರೀಕ್ಷೆ ನಡೆಸಿದರೂ ಸೂಜಿ ಹೊರತೆಗೆಯಲು ಸಾಧ್ಯವಾಗಲಿಲ್ಲ. ಕ್ರಮೇಣ ಆ ವಿಚಾರವನ್ನು ಮರೆತು ಬಿಟ್ಟಿದ್ದರು, ಕಳೆದ ಕೆಲ ದಿನ ಗಳ ಹಿಂದೆ ಮಲ ವಿಸರ್ಜನೆ ವೇಳೆ ತೀವ್ರ ನೋವು ಮತ್ತು ರಕ್ತ ಸ್ರಾವವಾದ ಕೂಡಲೇ ಆಸ್ಪತ್ರೆಗೆ ತೆರಳಿ ಸ್ಕ್ಯಾನಿಂಗ್‌ ಮಾಡಿಸಿಸಿದ್ದು ಈ ವೇಳೆ ಬಲ ಪೃಷ್ಟ ಭಾಗದಲ್ಲಿ ಸೂಜಿ ಪತ್ತೆಯಾಗಿದೆ.

ವೈದ್ಯರು 2 ಗಂಟೆಗಳ ಕಾಲ ಸುಧೀರ್ಘ‌ ಶಸ್ತ್ರ ಚಿಕಿತ್ಸೆ ನಡೆಸಿ ಸೂಜಿಯನ್ನು ಹೊರ ತೆಗೆದಿದ್ದಾರೆ ಎಂದು ವರದಿಯಾಗಿದೆ. ಮೂಳೆ ತಜ್ಞರು, ಅರಿವಳಿಕೆ ತಜ್ಞರು ಸೇರಿದಂತೆ ತಜ್ಞ ವೈದ್ಯರ ತಂಡ ಶಸ್ತ್ರ ಚಿಕಿತ್ಸೆಯನ್ನು ಯಶಸ್ವೀಯಾಗಿ ನಡೆಸಿದ್ದು ಇದೀಗ ಕಿರಣ್‌ ಕುಮಾರ್‌ ಚೇತರಿಸಿಕೊಳ್ಳುತ್ತಿದ್ದಾರೆ.

Comments are closed.