ರಾಷ್ಟ್ರೀಯ

ಮದುವೆಗೆ  2.5 ಲಕ್ಷ: ಅಧಿಕೃತ ಸುತ್ತೋಲೆ ಬ್ಯಾಂಕುಗಳಿಗೆ ಇನ್ನೂ ಬಂದಿಲ್ಲ!

Pinterest LinkedIn Tumblr

marriageನವದೆಹಲಿ: ₹500 ಮತ್ತು ₹1000 ಮುಖಬೆಲೆಯ ನೋಟು ರದ್ದತಿಯಿಂದ ದೇಶದಲ್ಲಿ ಕೋಲಾಹಲ ಸೃಷ್ಟಿಯಾಗಿರುವ ನಡುವೆಯೇ ಕೆಲವು ನಿರ್ಬಂಧಗಳನ್ನು ಸಡಿಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮದುವೆ ಖರ್ಚಿಗಾಗಿ ಬ್ಯಾಂಕ್‌ಗಳಿಂದ ₹ 2.5 ಲಕ್ಷ ವಿತ್‍ಡ್ರಾ ಮಾಡಲು ಅವಕಾಶ ಕಲ್ಪಿಸಲು ಬ್ಯಾಂಕ್‍ಗಳು ತೀರ್ಮಾನಿಸಿವೆ. ಆದರೆ ಬ್ಯಾಂಕ್‍ಗಳಿಗೆ ಇಲ್ಲಿಯವರೆಗೆ ಭಾರತೀಯ ರಿಸರ್ವ್ ಬ್ಯಾಂಕ್‍ನಿಂದ ಅಧಿಕೃತ ಸುತ್ತೋಲೆ ಬಂದಿಲ್ಲ.

ಮದುವೆ ಖರ್ಚಿಗಾಗಿ ಬ್ಯಾಂಕ್‌ಗಳಿಂದ ₹ 2.5 ಲಕ್ಷ ಬಿಡುಗಡೆಗೆ ಅವಕಾಶ ಕಲ್ಪಿಸಿದ ಬಗ್ಗೆ ಸರ್ಕಾರದಿಂದ ಅಧಿಕೃತ ಸುತ್ತೋಲೆ ಬರಲಿಲ್ಲ. ಹೀಗಾಗಿ ಮದುವೆ ಖರ್ಚಿಗಾಗಿ ನಾಗರಿಕರಿಗೆ ಹಣ ಪಡೆಯಲು ಅವಕಾಶವಿಲ್ಲ. ಆರ್ ಬಿ ಐ ಸೂಚನೆಗಾಗಿ ನಾವು ಕಾಯುತ್ತಿದ್ದೇವೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಟರ್ ಉಷಾ ಸುಬ್ರಮಣಿಯನ್ ಹೇಳಿದ್ದಾರೆ.

ಮುಂದಿನ ವಾರ ಅಂದರೆ ಸೋಮವಾರ ಅಥವಾ ಮಂಗಳವಾರ ಈ ಬಗ್ಗೆ ಅಧಿಕೃತ ಸೂಚನೆ ಲಭಿಸುವ ಸಾಧ್ಯತೆ ಇದೆ. ಈ ರೀತಿ ಸೂಚನೆ ಲಭಿಸಿದ ನಂತರವೇ ಮದುವೆ ಖರ್ಚಿಗಾಗಿ ಹಣ ವಿತ್‍ಡ್ರಾ ಮಾಡಬಹುದಾಗಿದೆ.

ಮದುವೆಯಾಗುವ ವ್ಯಕ್ತಿ ಅಥವಾ ಅವರ ಹೆತ್ತವರು ಮಾತ್ರ ಈ ಹಣವನ್ನು ವಿತ್‍ಡ್ರಾ ಮಾಡಲು ಸಾಧ್ಯ. ವಧು ಮತ್ತು ವರನ ಕುಟುಂಬಕ್ಕೆ ಪ್ರತ್ಯೇಕವಾಗಿ ಗರಿಷ್ಠ ₹2.5 ಲಕ್ಷದವರೆಗೆ ಹಣ ವಿತ್‍ಡ್ರಾ ಮಾಡಬಹುದಾಗಿದೆ. ಒಂದು ಮದುವೆಗೆ ಒಮ್ಮೆ ಮಾತ್ರ ವಿತ್‌ಡ್ರಾ ಮಾಡಲು ಅವಕಾಶವಿರುವುದು.

Comments are closed.