ರಾಷ್ಟ್ರೀಯ

ಐಸಿಯುನಿಂದ ಹೊರಬಂದ ಜಯಲಲಿತಾ

Pinterest LinkedIn Tumblr

jayalalitha-mariyappanಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗಿದ್ದು ಅವರನ್ನು ತೀವ್ರ ನಿಗಾ ಘಟಕದಿಂದ ವಿಶೇಷ ಕೋಣೆಗೆ ಶಿಫ್ಟ್ ಮಾಡಲಾಗಿದೆ.

ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯಾ ಅವರು ಗುಣಮುಖರಾಗಿದ್ದಾರೆ. ಹಾಗಾಗಿ ಇಂದು ಅವರನ್ನು ವಿಶೇಷ ಕೋಣೆಗೆ ಶಿಫ್ಟ್ ಮಾಡಲಾಗಿದೆ ಎಂದು ಎಐಎಡಿಎಂಕೆ ಮೂಲಗಳು ಹೇಳಿವೆ.

ಜಯಲಲಿತಾ ಅವರು ಬಯಸಿದರೆ ಮನೆಗೆ ತೆರಳಬಹುದು. ಅವರ ಉಸಿರಾಟ ಕ್ರಿಯೆಗೆ ಬೆಂಬಲವಾಗಿ ಪ್ರತಿ ದಿನ 15 ನಿಮಿಷಗಳವರೆಗೆ ಅವರಿಗೆ ಕೃತಕ ಉಸಿರಾಟ ಸಾಧನ ಅಳವಡಿಸಲಾಗುತ್ತಿದೆ. ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸೋಂಕು ತಡೆಯುವ ಉದ್ದೇಶದಿಂದಷ್ಟೆ ಅವರನ್ನು ತೀವ್ರ ನಿಗಾ ಘಟಕದಲ್ಲಿ ಮುಂದುವರಿಸಲಾಗಿತ್ತು ಎಂದು ಎಂದು ಅಪೋಲೊ ಆಸ್ಪತ್ರೆ ಅಧ್ಯಕ್ಷ ಪ್ರತಾಪ್‌ ಸಿ. ರೆಡ್ಡಿ ಹೇಳಿದ್ದಾರೆ.

Comments are closed.