ರಾಷ್ಟ್ರೀಯ

ಪಂಜಾಬ್, ಉತ್ತರಪ್ರದೇಶ ಚುನಾವಣೆ ನಂತರ  ಅಧ್ಯಕ್ಷ ಸ್ಥಾನದಿಂದ ಸೋನಿಯಾ ಕೆಳಗಿಳಿಯುವ ಸಾಧ್ಯತೆ?

Pinterest LinkedIn Tumblr

soniya-in-bangalore3ನವದೆಹಲಿ: 2017ರಲ್ಲಿ ಪಂಜಾಬ್ ಮತ್ತು ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ನಂತರ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ಇದೆ.

ಕಾಂಗ್ರೆಸ್ ಪಕ್ಷದ ಆಪ್ತ ಮೂಲಗಳ ಪ್ರಕಾರ ಅನಾರೋಗ್ಯ ಕಾರಣ ಸೋನಿಯಾ ಗಾಂಧಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ತೀರ್ಮಾನಿಸಿದ್ದಾರೆ.

ಆದಾಗ್ಯೂ, ಆರೋಗ್ಯ ಕೈಕೊಟ್ಟಿರುವುದರಿಂದ ಆದಷ್ಟು ಬೇಗ ಜವಾಬ್ದಾರಿಯುತ ಸ್ಥಾನದಿಂದ ಹೊರಬರಲು ಸೋನಿಯಾ ಅವರು ನಿರ್ಧರಿಸಿದ್ದರೂ, ಪಂಜಾಬ್ ಮತ್ತು ಉತ್ತರ ಪ್ರದೇಶದ ಚುನಾವಣೆ ನಡೆಯುವವರೆಗೆ ಅಧ್ಯಕ್ಷ ಸ್ಥಾನದಲ್ಲಿರುವಂತೆ ಪಕ್ಷದ ಸದಸ್ಯರು ಒತ್ತಾಯಿಸಿದ್ದಾರೆ ಎಂದು ದ ಇಂಡಿಯನ್ ಎಕ್ಸ್ ಪ್ರೆಸ್ ಡಾಟ್ ಕಾಂ ಪತ್ರಿಕೆ ವರದಿ ಮಾಡಿದೆ.

ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಈ ಎರಡು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಫೆಬ್ರವರಿ 1, 2017ರಂದು ಬಜೆಟ್ ಮಂಡನೆಯಾಗಲಿದೆ.

ಏತನ್ಮಧ್ಯೆ, ಬಲ್ಲಮೂಲಗಳ ಪ್ರಕಾರ ಚುನಾವಣೆಗೆ ಮುನ್ನ ರಾಹುಲ್ ಗಾಂಧಿಗೆ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇಲ್ಲ. ಆದರೆ ಅದಕ್ಕಿರುವ ಸಿದ್ಧತೆಗಳು ನಡೆದು ಬರುತ್ತಿವೆ.

ರಾಹುಲ್‍ಗೆ ಪಟ್ಟಾಭಿಷೇಕ ಮಾಡಬೇಕೆಂದು ಪಕ್ಷದ ಸದಸ್ಯರು ಒತ್ತಾಯಿಸುತ್ತಿದ್ದರೂ, ಪಂಜಾಬ್ ಮತ್ತು ಉತ್ತರ ಪ್ರದೇಶದ ಚುನಾವಣೆ ಮಹತ್ತರ ಸಂಗತಿಯಾಗಿರುವುದರಿಂದ ಚುನಾವಣೆವರೆಗೆ ಸೋನಿಯಾ ಗಾಂಧಿಯವರೇ ಪಕ್ಷದ ಚುಕ್ಕಾಣಿ ಹಿಡಿಯುವಂತೆ ಕಾಂಗ್ರೆಸ್ ಆಗ್ರಹಿಸಿದೆ.

Comments are closed.