ರಾಷ್ಟ್ರೀಯ

ರತನ್ ಟಾಟಾರಿಂದ ಟಾಟಾ ಕುಟುಂಬಕ್ಕೆ ಕೆಟ್ಟ ಹೆಸರು: ಸುಬ್ರಮಣಿಯನ್ ಸ್ವಾಮಿ

Pinterest LinkedIn Tumblr

subramanian-swamyನವದೆಹಲಿ: ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಒಬ್ಬ ಭ್ರಷ್ಟ ವ್ಯಕ್ತಿ ಮತ್ತು ಅವರಿಂದ ಟಾಟಾ ಕುಟುಂಬಕ್ಕೆ ಕೆಟ್ಟ ಹೆಸರು ಬಂದಿದೆ ಎಂದು ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಶುಕ್ರವಾರ ಆರೋಪಿಸಿದ್ದಾರೆ.
ಪ್ರಸ್ತೂತ ಟಾಟಾ ಸನ್ಸ್ ಮತ್ತು ಸೈರಸ್ ಮಿಸ್ತ್ರಿ ನಡುವಿನ ಮುಸುಕಿನ ಗುದ್ದಾಟದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಮತ್ತು ಕಂಪನಿಯನ್ನು ಸರ್ಕಾರದ ವಶಕ್ಕೆ ಪಡೆಯುವ ಅಗತ್ಯ ಇದೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.
ಮಿಸ್ತ್ರಿ ಒಬ್ಬ ಪ್ರಾಮಾಣಿಕ ವ್ಯಕ್ತಿ. ಆದರೆ ಟಾಟಾ ಒಬ್ಬ ಭ್ರಷ್ಟ ವ್ಯಕ್ತಿಯಾಗಿದ್ದು, ಹಲವು ವಿಚಾರಗಳನ್ನು ಮುಚ್ಚಿಟ್ಟಿದ್ದಾರೆ. ಏರ್ ಏಷ್ಯಾ ವಿಚಾರದಲ್ಲಿ ಅದು ಈಗಾಗಲೇ ಬಹಿರಂಗವಾಗಿದೆ. ಇನ್ನು ಡೋಕೋಮೊ ವಂಚನೆ, ಶಿವ ಶಂಕರನ್ ವಂಚನೆ ಹಾಗೂ ರಾಡಿಯಾ ಪ್ರಕರಣಗಳಲ್ಲಿ ಟಾಟಾ ಭಾಗಿಯಾಗಿದ್ದು, ಈ ವ್ಯಕ್ತಿಯಿಂದ ಟಾಟಾ ಕುಟುಂಬಕ್ಕೆ ಒಂದು ಕೆಟ್ಟ ಹೆಸರು ಮತ್ತು ಟಾಟಾ ದತ್ತು ಪುತ್ರ ಎಂದು ಸ್ವಾಮಿ ಹೇಳಿದ್ದಾರೆ.
ಅಕ್ಟೋಬರ್ 24ರಂದು ಸೈರಸ್ ಮಿಸ್ತಿ ಅವರನ್ನು ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದ್ದು, ಉದ್ಯಮ ವಲಯಕ್ಕೆ ಅಚ್ಚರಿ ಮೂಡಿಸಿದೆ.

Comments are closed.