ರಾಷ್ಟ್ರೀಯ

ನೋಟು ನಿಷೇಧದ ವಿರುದ್ಧ ಸುಪ್ರೀಂ’ನಲ್ಲಿ ಪಿಐಎಲ್

Pinterest LinkedIn Tumblr

suprimನವದೆಹಲಿ (ನ.11): ರೂ.500 ಹಾಗೂ ರೂ. 1000 ನೋಟುಗಳನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್’ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ನೋಟು ನಿಷೇಧಿಸುವ ಸರ್ಕಾರದ ಕ್ರಮವು ದೇಶದ ಜನರ ಜೀವನ ಹಾಗೂ ವ್ಯಾಪಾರ ನಡೆಸುವ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಸರ್ಕಾರದ ಕ್ರಮವು ಸರ್ವಾಧಿಕಾರಿ ಧೋರಣೆಯಾಗಿದೆ ಎಂದಿರುವ ಅರ್ಜಿದಾರರು, ಅನಿರೀಕ್ಷಿತವಾದ ನಿಷೇಧದಿಂದ ಜನಸಾಮಾನ್ಯರ ಜೀವನ ನಿರ್ವಹಣೆಗೆ ಮಾರಕವಾಗಿದೆ ಹಾಗೂ ದೊಡ್ಡ ಸಮಸ್ಯೆಗಳನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದ್ದಾರೆ.
ಸರ್ಕಾರ ನೋಟುಗಳನ್ನು ರದ್ದುಪಡಿಸುವ ಮುಂಚೆ ಒಂದೋ ಸಮಯಾವಕಾಶ ನೀಡಬೇಕು, ಅಥವಾ ನಿಷೇಧವನ್ನು ಹಿಂಪಡೆಯಬೇಕೆಂದು ಎಂದು ಅರ್ಜಿದಾರರು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಅರ್ಜಿಯನ್ನು ಈ ವಾರದಲ್ಲೇ ವಿಚಾರಣೆ ನಡೆಸುವ ಸಾಧ್ಯತೆಗಳಿವೆ.

Comments are closed.