ರಾಷ್ಟ್ರೀಯ

ಹಿಂಪಡೆದ ನೋಟುಗಳನ್ನು ಆರ್ ಬಿಐ ಏನ್ ಮಾಡುತ್ತದೆ?

Pinterest LinkedIn Tumblr

RBIWEBನವದೆಹಲಿ: ಪ್ರಧಾನಿ ಮೋದಿ ಸರ್ಕಾರ ಮಂಗಳವಾರ 500 ರೂ. ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಲಾಗಿದೆ. ಅಂದಹಾಗೆ ಇದೇ ಮೊದಲ ಬಾರಿಗೆ ನೋಟುಗಳನ್ನು ಹಿಂಪಡೆದುಕೊಂಡಿಲ್ಲ ಸ್ವಾತಂತ್ರ್ಯ ಪೂರ್ವದಲ್ಲಿ ಈ ರೀತಿಯ ಆದೇಶವನ್ನು ಹೊರಡಿಸಲಾಗಿತ್ತು.

1946ರಲ್ಲಿ 10 ಸಾವಿರ ರೂ. ಮತ್ತು 1 ಸಾವಿರ ರೂ. ನೋಟುಗಳ ಚಲಾವಣೆಯನ್ನು ನಿರ್ಬಂಧಿಸಲಾಗಿತ್ತು. ಆದರೆ 19458ರಲ್ಲಿ ಪುನಃ 1ಸಾವಿರ, 5ಸಾವಿರ ಮತ್ತು 10ಸಾವಿರ ರೂ ಮುಖಬೆಲೆಯ ನೋಟುಗಳನ್ನು ಮರು ಚಲಾವಣೆಗೆ ತರಲಾಗಿತ್ತು. ಆದರೆ ಮತ್ತೆ 1978ರಲ್ಲಿ ಈ ಎಲ್ಲಾ ನೋಟುಗಳ ಚಲಾವಣೆಯನ್ನು ಅಂದಿನ ಸರ್ಕಾರ ನಿಷೇಧಿಸಲಾಯಿತು.

1978ರ ಜನೇವರಿ 16ರಂದು ಅಂದಿನ ಜನತಾ ಪಾರ್ಟಿ ಸರ್ಕಾರ ಬೆಳ್ಳಂಬೆಳ್ಳಿಗ್ಗೆ ಸುಗ್ರೀವಾಜ್ಞೆಯನ್ನು ಜಾರಿಗೊಳಿಸುವ ಮೂಲಕ ನಿಷೇಧ ಜಾರಿಗೊಳಿಸಿತ್ತು. ಅಂದಿನ ರಾಷ್ಟ್ರಪತಿ ನೀಲಂ ಸಂಜೀವ್ ರೆಡ್ಡಿ, ಆರ್‍ಬಿಐ ಗರ್ವನರ್ ಆಗಿ ಐಜಿ ಪಟೇಲ್ ಕಾರ್ಯ ನಿರ್ವಹಿಸುತ್ತಿದ್ದರು. ಅಂದು ಬೆಳಗ್ಗೆ 9 ಗಂಟೆಗೆ ಆಲ್ ಇಂಡಿಯಾ ರೇಡಿಯೋದಲ್ಲಿ ನೋಟುಗಳ ರದ್ದತಿ ಬಗ್ಗೆ ಘೋಷಣೆ ಮಾಡಲಾಯಿತು ಮತ್ತು ಜನವರಿ 17ರಂದು ಬ್ಯಾಂಕ್‍ಗಳನ್ನು ಒಂದು ದಿನದ ಮಟ್ಟಿಗೆ ಬಂದ್ ಮಾಡಲಾಗಿತ್ತು.

ವಾಪಸ್ ಪಡೆದ ನೋಟ್‍ಗಳನ್ನು ಆರ್‍ಬಿಐ ಏನು ಮಾಡುತ್ತದೆ?: ಕೇಂದ್ರ ಸರ್ಕಾರದ ಆದೇಶದಂತೆ ಹಣದ ಮಾರುಕಟ್ಟೆಯಿಂದ ನೋಟ್‍ಗಳನ್ನು ಆರ್‍ಬಿಐ ಹಿಂಪಡೆದುಕೊಳ್ಳುತ್ತದೆ. ವಾಪಸ್ ಪಡೆದುಕೊಂಡ ನೋಟ್‍ಗಳನ್ನು ಆರ್‍ಬಿಐ ಖಜಾನೆಗಳಿಗೆ ತರಲಾಗುತ್ತದೆ. ಅಲ್ಲಿ ಈ ನೋಟಗಳನ್ನು ಪರಿಶೀಲನೆ ಒಳಪಡಿಸಿ ಮರು ಬಳಕೆ ಮಾಡಬಹುದಾದ ನೋಟುಗಳು ಮತ್ತು ಮರು ಬಳಕೆ ಮಾಡಲಾಗದ ನೋಟುಗಳೆಂದು ವಿಂಗಡನೆ ಮಾಡಲಾಗುತ್ತದೆ.

ಮರು ಬಳಕೆ ಮಾಡಬಹುದಾದ ನೋಟುಗಳನ್ನು ಆರ್‍ಬಿಐ ಮತ್ತೆ ಮರು ಚಲಾವಣೆಗೆ ಬಿಡುಗಡೆ ಮಾಡುತ್ತದೆ. ಉಳಿದಿರುವ ನೋಟುಗಳನ್ನು ಕ್ರಷಿಂಗ್ ಮೂಲಕ ಪುಡಿ ಮಾಡಲಾಗುತ್ತದೆ. ಸಾಮಾನ್ಯವಾಗಿ ಹಣದ ಮಾರುಕಟ್ಟೆಯಿಂದ ನಾಣ್ಯಗಳನ್ನು ಆರ್‍ಬಿಐ ಹಿಂಪಡೆಯುವದಿಲ್ಲ.

Comments are closed.