ನವದೆಹಲಿ: ಪ್ರಸಾರದ ಮೇಲೆ ಒಂದು ದಿನದ ನಿರ್ಬಂಧ ಹೇರಿರುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ‘ಎನ್‌ಡಿಟಿವಿ ಇಂಡಿಯಾ’ ಸುದ್ದಿವಾಹಿನಿ ಸುಪ್ರೀಂಕೋರ್ಟ್‌ಗೆ ಸೋಮವಾರ ಅರ್ಜಿ ಸಲ್ಲಿಸಿದೆ.
ಸರ್ಕಾರದ ವಿಧಿಸಿರುವ ನಿರ್ಬಂಧದ ಸಿಂಧುತ್ವವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
ನವೆಂಬರ್ 9ರಂದು ವಾಹಿನಿಯ ಪ್ರಸಾರ ಅಥವಾ ಮರುಪ್ರಸಾರವನ್ನು ಸಂಪೂರ್ಣ ಸ್ಥಗಿತಗೊಳಿಸುವಂತೆ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಎನ್‌ಡಿಟಿವಿ ಇಂಡಿಯಾಗೆ ಸೂಚನೆ ನೀಡಿದೆ.
‘ಸರ್ಕಾರ ವಿಧಿಸಿರುವ ನಿರ್ಬಂಧ ಸಾಂವಿಧಾನಿಕವೇ ಎಂಬುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ’ ಎಂದು ವಾಹಿನಿ ತಿಳಿಸಿದೆ.
ಪಠಾಣ್‌ಕೋಟ್ ವಾಯುನೆಲೆ ಮೇಲೆ ನಡೆದ ಉಗ್ರರ ದಾಳಿಯ ಸುದ್ದಿ ಪ್ರಸಾರದ ಸಂದರ್ಭದಲ್ಲಿ ಸೇನಾನೆಲೆಯ ಕೆಲ ಸೂಕ್ಷ್ಮ ಮಾಹಿತಿಗಳನ್ನು ಬಿತ್ತರಿಸಿದ ಕಾರಣ ನೀಡಿ ಎನ್‌ಡಿಟಿವಿ ಇಂಡಿಯಾ ವಾಹಿನಿಯ ಪ್ರಸಾರದ ಮೇಲೆ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಒಂದು ದಿನ ನಿರ್ಬಂಧ ಹೇರಿದೆ.
ಈ ನಿರ್ಬಂಧಕ್ಕೆ ಪತ್ರಕರ್ತರು ಹಾಗೂ ಚಿಂತಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ.
Comments are closed.