ನವದೆಹಲಿ (ಅ.28): ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಪಾಕಿಸ್ತಾನಿ ಹೈಕಮಿಷನ್ ಕಚೇರಿ ಅಧಿಕಾರಿಯನ್ನು ಭಾರತವು ಹೊರದೂಡಿದ ಬೆನ್ನಲ್ಲೇ, ಪಾಕಿಸ್ತಾನವು ಕೂಡಾ ಭಾರತೀಯ ಅಧಿಕಾರಿಯೊಬ್ಬರನ್ನು ಪಾಕಿಸ್ತಾನ ಬಿಟ್ಟು ಹೋಗುವಂತೆ ಸೂಚಿಸಿದೆ.
ಇಸ್ಲಾಮಬಾದ್’ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯಲ್ಲಿ ಅಧಿಕಾರಿಯಾಗಿರುವ ಸುರ್ಜಿತ್ ಸಿಂಗ್’ರನ್ನು ಕುಟುಂಬ ಸಮೇತ ಪಾಕಿಸ್ತಾನ ಬಿಟ್ಟು ಹೋಗುವಂತೆ ಸೂಚಿಸಲಾಗಿದೆ.
ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ನಿನ್ನೆ ಪಾಕಿಸ್ತಾನಿ ಅಧಿಕಾರಿ ಮೆಹಮೂದ್ ಅಖ್ತರ್ ಎಂಬವರನ್ನು ಭಾರತ ಬಿಟ್ಟು ಹೋಗುವಂತೆ ಸೂಚಿಸಲಾಗಿತ್ತು.
ಪಾಕಿಸ್ತಾನ ಕ್ರಮಕ್ಕೆ ಭಾರತ ಖಂಡನೆ:
ಪಾಕಿಸ್ತಾನಸದ ಕ್ರಮವನ್ನು ಖಂಡಿಸಿರುವ ವಿದೇಶಾಂಗ ವ್ಯವಹಾರ ಇಲಾಖೆಯು, ಪಾಕಿಸ್ತಾನವು ಯಾವುದೇ ಸಕಾರಣ ನೀಡದೇ ಭಾರತೀಯ ಅಧಿಕಾರಿಯನ್ನು ಹೊರಹಾಕಿದೆ. ಆ ಮೂಲಕ ಪಾಕಿಸ್ತಾನವು ಭಾರತ-ವಿರೋಧಿ ನೀತಿಯನ್ನು ಮುಂದುವರೆಸಿದೆ, ಎಂದು ಹೇಳಿದೆ.