ರಾಷ್ಟ್ರೀಯ

ಮನೆಯೊಡೆಯನ ಪ್ರೇಮ ವ್ಯವಹಾರ ಬಿಚ್ಚಿಟ ಗಿಣಿರಾಯ

Pinterest LinkedIn Tumblr

parrot

ಕುವೈತ್,ಅ.26 : ಸಾಕು ಗಿಣಿಯೊಂದು ಮನೆಯೊಡೆಯ ಕೆಲಸದಾಕೆಯೊಡನೆ ನಡೆಸುತ್ತಿದ್ದ ಚಕ್ಕಂದವನ್ನು ಆತನ ಪತ್ನಿಗೆ ಬಯಲು ಮಾಡಿದ ಕುತೂಹಲಕಾರಿ ಘಟನೆ ನಗರದಿಂದ ವರದಿಯಾಗಿದೆ. ಆ ಗಿಣಿ ಅವರಿಬ್ಬರು ಸರಸ ಸಲ್ಲಾಪದ ಸಂದರ್ಭ ಆಡುತ್ತಿದ್ದ ಮಾತುಗಳನ್ನು ಆತನ ಪತ್ನಿಯ ಎದುರು ಉಚ್ಚರಿಸಿತ್ತೆನ್ನಲಾಗಿದೆ. ಇವರಿಬ್ಬರ ಪ್ರೇಮ ವ್ಯವಹಾರದ ಬಗ್ಗೆ ಮೊದಲೇ ಶಂಕೆಯಿಂದಿದ್ದಪತ್ನಿ ಇದರಿಂದ ಕೆಂಡಾಮಂಡಲವಾಗಿ ಪತಿ ವಿರುದ್ಧ ಪೊಲೀಸ್ ದೂರು ದಾಖಲಿಸಿ ತನ್ನ ಪತಿ ತನಗೆ ಮೋಸ ಮಾಡಿದ್ದಾನೆಂದು ಆರೋಪಿಸಿದ್ದಳು.

ತಾನೊಮ್ಮೆ ಕಚೇರಿಯಿದ ಬೇಗನೆ ಮನೆಗೆ ಮರಳಿದಾಗ ತನ್ನ ಪತಿಗೆ ಆಶ್ಚರ್ಯವಾಗಿತ್ತಲ್ಲದೆ ಆತಸ್ವಲ್ಪ ಮಟ್ಟಿಗೆ ಬೆದರಿಯೂ ಹೋಗಿದ್ದ ಎಂದು ಆಕೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.
ಗಿಣಿ ಅವರಿಬ್ಬರು ಆಡುತ್ತಿದ್ದ ಅಸಹ್ಯಕರ ಪದಗಳನ್ನು ಪುನರುಚ್ಚರಿಸಿತ್ತೆನ್ನಲಾಗಿದೆ.

ಆದರೆ ಸಾಕಷ್ಟು ಸಾಕ್ಷ್ಯಗಳು ಲಭ್ಯವಿಲ್ಲದ ಕಾರಣ ಈ ಪ್ರಕರಣವನ್ನು ಸಾಬೀತು ಪಡಿಸಲಾಗುವುದಿಲ್ಲ ಹಾಗೂ ಗಿಣಿ ಟಿವಿಯಲ್ಲಿ ಕೇಳಿಸಿಕೊಂಡ ಸಂಭಾಷಣೆಯನ್ನು ಪುನರುಚ್ಚರಿಸಿರುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದ್ದು ಪತಿ ಕಠಿಣ ಶಿಕ್ಷೆಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾನೆ.

ಅಕ್ರಮ ಸಂಬಂಧ ಸಾಬೀತಾದಲ್ಲಿ ಈ ಗಲ್ಫ್ ರಾಷ್ಟ್ರದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ.

Comments are closed.