ರಾಷ್ಟ್ರೀಯ

ಬಿಜೆಪಿ ಪೋಸ್ಟರ್​ನಲ್ಲಿ ಕಾಣಿಸಿಕೊಂಡ ಅಮೆರಿಕ ಯೋಧರು!

Pinterest LinkedIn Tumblr

32

ವಾರಣಾಸಿ: ಭಾರತದ ಸರ್ಜಿಕಲ್ ದಾಳಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಲು ಉತ್ತರಪ್ರದೇಶದ ವಾರಾಣಸಿಯಲ್ಲಿ ಬಿಜೆಪಿ ಹಾಕಿರುವ ಪೋಸ್ಟರ್ಗಳು ಈಗ ವಿವಾದಕ್ಕೆ ಕಾರಣವಾಗಿವೆ. ಹತ್ತು ವರ್ಷಗಳ ಹಿಂದೆ ಇರಾಕ್ನಲ್ಲಿ ಹೋರಾಡಿದ ಅಮೆರಿಕ ಯೋಧರು ಬಿಜೆಪಿ ಪೋಸ್ಟರ್ನಲ್ಲಿ ಕಾಣಿಸಿಕೊಂಡಿದ್ದಾರೆ!

ಭಾರತದ ಸರ್ಜಿಕಲ್ ದಾಳಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಲು ಉತ್ತರಪ್ರದೇಶದ ವಾರಾಣಸಿಯಲ್ಲಿ ಬಿಜೆಪಿ ಹಾಕಿರುವ ಪೋಸ್ಟರ್ಗಳು ಈಗ ವಿವಾದಕ್ಕೆ ಕಾರಣವಾಗಿವೆ. ಹತ್ತು ವರ್ಷಗಳ ಹಿಂದೆ ಇರಾಕ್’ನಲ್ಲಿ ಹೋರಾಡಿದ ಅಮೆರಿಕ ಯೋಧರು ಬಿಜೆಪಿ ಪೋಸ್ಟರ್’ನಲ್ಲಿ ಕಾಣಿಸಿಕೊಂಡಿದ್ದಾರೆ!

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಅನೇಕ ಸ್ಥಳೀಯ ಬಿಜೆಪಿ ಮುಖಂಡರ ಭಾವಚಿತ್ರವಿರುವ ಪೋಸ್ಟರ್’ನಲ್ಲಿ ಭಾರತೀಯ ಸೈನಿಕರ ಬದಲು ಅಮೆರಿಕದ ಯೋಧರ ಚಿತ್ರ ಬಳಸಲಾಗಿದೆ. ಈ ಫೋಟೋ 10 ವರ್ಷಗಳ ಹಿಂದೆ ಇರಾಕ್ನ ವೈನಾಟ್’ನಲ್ಲಿ ತೆಗೆದ ಅಮೆರಿಕದ ಸ್ಕ್ರೀಮಿಂಗ್ ಈಗಲ್ಸ್ ಪಡೆಯ 101 ಏರ್ಬೋರ್ನ್ ಡಿವಿಷನ್ನ ಸೈನಿಕರದ್ದಾಗಿದೆ.

ಬ್ಯಾಂಡ್ ಆಫ್ ಬ್ರದರ್ಸ್ ಎಂಬ ಮಿನಿಸಿರೀಸ್ ಮೂಲಕ ಈ ಚಿತ್ರ ಪ್ರಸಿದ್ಧಿ ಪಡೆದಿದೆ.ಸರ್ಜಿಕಲ್ ದಾಳಿಯನ್ನು ಬಿಜೆಪಿ ತನ್ನ ಸಾಧನೆ ಎಂದು ಬಿಂಬಿಸುವ ಪ್ರಯತ್ನ ನಡೆಸಿರುವುದು ಈಗಾಗಲೇ ವಿಪಕ್ಷಗಳ ಟೀಕೆಗೆ ಗುರಿಯಾಗಿದೆ.

Comments are closed.