ರಾಷ್ಟ್ರೀಯ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವರುಣ್ ಗಾಂಧಿ ಸೆಕ್ಸ್ ಹಗರಣದ ಫೋಟೋ ! ದಿನಕ್ಕೊಂದು ತಿರುವು ಪಡೆಯುತ್ತಿರುವ ಹನಿ ಟ್ರ್ಯಾಪ್ ಪ್ರಕರಣ

Pinterest LinkedIn Tumblr

varun

ನವದೆಹಲಿ: ಬಿಜೆಪಿ ಸಂಸದ ವರುಣ್ ಗಾಂಧಿ ಅವರ ವಿರುದ್ಧದ ಹನಿ ಟ್ರ್ಯಾಪ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ತಮ್ಮ ವಿರುದ್ಧ ಆರೋಪಗಳನ್ನು ವರುಣ್ ಗಾಂಧಿ ಅಲ್ಲಗಳೆಯುತ್ತಾ ಬಂದ ಬೆನ್ನಲ್ಲೇ ಹುಡುಗಿಯೊಂದಿಗೆ ಅವರಿರುವ ಖಾಸಗಿ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕೊಠಡಿಯೊಂದರಲ್ಲಿ ವರುಣ್ ಗಾಂಧಿ ಹಾಗೂ ಹುಡುಗಿಯೊಬ್ಬಳು ಸೆಕ್ಸ್ ನಲ್ಲಿ ತೊಡಗಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಪ್, ಇನ್ ಸ್ಟಾಗ್ರಾಮ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಹಿಂದೆ ಬಿಜೆಪಿ ಸಂಸದ ವರುಣ್ ಗಾಂಧಿ ಹನಿ ಟ್ರ್ಯಾಪ್ ಗೆ ಒಳಗಾಗಿ ದೇಶದ ಮಹತ್ವದ ರಕ್ಷಣಾ ಮಾಹಿತಿಗಳನ್ನು ಕಳವು ಮಾಡಿ ವಿದೇಶಕ್ಕೆ ರವಾನಿಸಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಖಾಸಗಿ ಪತ್ರಿಕೆಯೊಂದು ವರದಿ ಮಾಡಿ, ಸುಲ್ತಾನ್ ಪುರ ಕ್ಷೇತ್ರದ ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಹನಿಟ್ರ್ಯಾಪ್ ಗೆ ಒಳಗಾಗಿದ್ದು, ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ದಲ್ಲಾಳಿಯೊಬ್ಬರಿಗೆ ದೇಶದ ತೀರಾ ಗೌಪ್ಯವಾದ ಮತ್ತು ಅಮೂಲ್ಯ ರಕ್ಷಣಾ ಮಾಹಿತಿಗಳನ್ನು ಕಳವು ಮಾಡಿ ರವಾನಿಸಿದ್ದಾರೆ ಎಂದು ವರದಿ ಮಾಡಿತ್ತು.

ಹುಡುಗಿಯರನ್ನು ಮುಂದೆ ಬಿಟ್ಟು ಅವರ ಮೂಲಕ ವರುಣ್ ಗಾಂಧಿ ಅವರನ್ನು ಬಲೆಗೆ ಹಾಕಿಕೊಂಡು ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ದಲ್ಲಾಳಿ ಅಭಿಷೇಕ್ ವರ್ಮಾ ಎಂಬಾತ ರಕ್ಷಣಾ ಮಾಹಿತಿಯನ್ನು ಕಳವು ಮಾಡಿಸಿದ್ದಾನೆ ಎಂದು ವರದಿಯಲ್ಲಿ ಹೇಳಲಾಗಿತ್ತು. ಇದಕ್ಕೆ ಪೂರಕವೆಂಬಂತೆ ಅಮೆರಿಕದ ಖ್ಯಾತ ಮಾಹಿತಿ ಹಕ್ಕು ಹೋರಾಟಗಾರ ಸಿ.ಎಡ್ಮಂಡ್ಸ್ ಅಲೆನ್ ಅವರು ಪ್ರಧಾನಮಂತ್ರಿ ಸಚಿವಾಲಯಕ್ಕೆ ಪತ್ರವೊಂದನ್ನು ಬರೆದು, ರಾಷ್ಟ್ರೀಯ ಭದ್ರತಾ ಮಾಹಿತಿ ನೀಡಿರುವ ಸಾಧ್ಯತೆ ಇರುವುದಾಗಿ ಪತ್ರದಲ್ಲಿ ಆರೋಪಿಸಿದ್ದರು ಎಂದು ಪತ್ರಿಕೆ ವರದಿ ಮಾಡಿತ್ತು.

ಈ ಎಲ್ಲ ಆರೋಪಗಳನ್ನು ವರುಣ್ ಗಾಂಧಿ ನಿರಾಕರಿಸುತ್ತಾ ಬಂದಿದ್ದಾರೆಯಾದರೂ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಅವರ ಮುಖಚರ್ಯೆಯನ್ನೇ ಹೋಲುವ ಫೋಟೋಗಳು ಹರಿದಾಡುತ್ತಿವೆ. ಹೀಗಾಗಿ ಫೋಟೋ ಹಿಂದಿನ ಅಸಲೀಯತ್ತೇನು? ಮತ್ತು ಒಂದು ವೇಳೆ ಫೋಟದಲ್ಲಿರುವುದು ವರುಣ್ ಗಾಂಧಿ ಅವರೇ ಆಗಿದ್ದರೆ ಹನಿಟ್ರಾಪ್ ಪ್ರಕರಣದ ಸತ್ಯಾಸತ್ಯತೆಯನ್ನು ತನಿಖೆಗೊಳಪಡಿಸಬೇಕಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Comments are closed.