ರಾಷ್ಟ್ರೀಯ

ಅತ್ಯಾಚಾರಕ್ಕೆ ಯತ್ನಿಸಿದ ಯುವಕನ ಗುಪ್ತಾಂಗ ಕತ್ತರಿಸಿದ ಯುವತಿ

Pinterest LinkedIn Tumblr

Rape-by-foce-600ಮೀರತ್: ಚಾಕುವಿನಿಂದ ಬೆದರಿಸಿ ಅತ್ಯಾಚಾರವೆಸಗಲು ಬಂದಿದ್ದ ವ್ಯಕ್ತಿಯ ಗುಪ್ತಾಂಗವನ್ನು ಯುವತಿಯೊಬ್ಬಳು ಕಟ್ ಮಾಡಿದ ಹೇಯ ಘಟನೆ ವರದಿಯಾಗಿದೆ.

ಇಂಚೋಲಿ ಪ್ರದೇಶದಲ್ಲಿ 17 ವರ್ಷ ವಯಸ್ಸಿನ ದಲಿತ ಯುವತಿಯೊಬ್ಬಳು ಮೂತ್ರ ಮಾಡಲು ಅರಣ್ಯ ಪ್ರದೇಶದೊಳಗೆ ತೆರಳಿದ್ದಾಗ ಘಟನೆ ನಡೆದಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

23 ವರ್ಷ ವಯಸ್ಸಿನ ರಯೀಸ್ ಎನ್ನುವ ಯುವಕ, ದಲಿತ ಯುವತಿಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸುತ್ತಿರುವಾಗ ಆತನ ಕೈಯಿಂದ ಚಾಕು ಕಸಿದುಕೊಂಡ ಯುವತಿ ಆತನ ಗುಪ್ತಾಂಗವನ್ನು ಕಚಕ್ ಎನ್ನಿಸಿದ್ದಾಳೆ.

ಆರೋಪಿ ರಯೀಸ್ ನೋವಿನಿಂದ ಕೂಗುತ್ತಿರುವಾಗ ಅಲ್ಲಿಗೆ ಧಾವಿಸಿದ ಗ್ರಾಮಸ್ಥರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆತನ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆರೋಪಿಯ ಗುಪ್ತಾಂಗವನ್ನು ಕತ್ತರಿಸಿದ ದಲಿತ ಯುವತಿ ಆತನ ಗುಪ್ತಾಂಗ ತೆಗೆದುಕೊಂಡು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಪೊಲೀಸರು ಆರೋಪಿಯ ವಿರುದ್ಧ ರೇಪ್ ಪ್ರಕರಣ ಸೇರಿದಂತೆ ಇತರ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಯುವಕ ಮತ್ತು ಯುವತಿ ಬೇರೆ ಬೇರೆ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಗ್ರಾಮದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.