ರಾಷ್ಟ್ರೀಯ

ಟಾಟಾ ಸನ್ಸ್ ಕಂಪೆನಿ ಸಮೂಹದ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿ ವಜಾ

Pinterest LinkedIn Tumblr

cyrus-mistryನವದೆಹಲಿ: ಟಾಟಾ ಸನ್ಸ್ ಕಂಪೆನಿ ಸಮೂಹದ ಅಧ್ಯಕ್ಷ ಸೈರಸ್ ಮಿಸ್ತ್ರಿಗೆ ಕೊಕ್ ನೀಡಲಾಗಿದೆ. ಇಂದು ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಮಿಸ್ತ್ರಿ ಅವರನ್ನು ಕೈಬಿಡುವ ನಿರ್ಧಾರ ತೆಗೆದುಕೊಳ್ಳಲಾಯಿತು.

ಮಿಸ್ತ್ರಿ ಅವರನ್ನು ವಜಾ ಮಾಡಿರುವುದರಿಂದ ರತನ್ ಟಾಟಾ ಅವರೇ ನಾಲ್ಕು ತಿಂಗಳ ಕಾಲ ಹಂಗಾಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಅನಿರೀಕ್ಷಿತವಾಗಿ ಈ ಬೆಳವಣಿಗೆ ನಡೆದಿದ್ದು, ಟಾಟಾ ಸನ್ಸ್ ಗ್ರೂಪ್ ಸದಸ್ಯರು 48ರ ಹರೆಯದ ಮಿಸ್ತ್ರಿಯವರನ್ನು ಕೈ ಬಿಡುವ ತೀರ್ಮಾನ ಕೈಗೊಂಡಿದ್ದಾರೆ. ಮಿಸ್ತ್ರಿ ಅವರು 2012 ರಲ್ಲಿ ಟಾಟಾ ಸನ್ಸ್ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

ಮುಂದಿನ ಅಧ್ಯಕ್ಷರನ್ನು ನೇಮಕ ಮಾಡುವುದಕ್ಕಾಗಿ ಕಾರ್ಯಕಾರಿ ಮಂಡಳಿ ಸಮಿತಿಯೊಂದನ್ನು ರಚಿಸಿದ್ದು, ನಾಲ್ಕು ತಿಂಗಳೊಳಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು.

ಆದಾಗ್ಯೂ, ಮಿಸ್ತ್ರಿ ಅವರನ್ನು ಕೈ ಬಿಟ್ಟಿರುವುದಕ್ಕೆ ಟಾಟಾ ಸನ್ಸ್ ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಿಲ್ಲ.

Comments are closed.