ರಾಷ್ಟ್ರೀಯ

ಮುಂಬೈ ದಾಳಿ ನಂತರ ನಿಷೇಧಿಸಲ್ಪಟ್ಟ ಸ್ಯಾಟಲೈಟ್ ಫೋನ್ ಬಳಕೆ: ನಾಲ್ವರ ಬಂಧನ

Pinterest LinkedIn Tumblr

satellite-phoneಬೆರ್ಹಾಮ್ಪುರ್: ನಿಷೇಧಿತ ಸ್ಯಾಟಲೈಟ್ ಫೋನ್ ಗಳನ್ನು ಬಳಕೆ ಮಾಡುತ್ತಿದ್ದ ನಾಲ್ಕು ಫಿಲಿಫೈನ್ಸ್ ಮೂಲದ ವ್ಯಕ್ತಿಗಳನ್ನು ಒಡಿಶಾ ಪೊಲೀಸರು ಬಂಧನಕ್ಕೊಳಪಡಿಸಿರುವುದಾಗಿ ತಿಳಿದುಬಂದಿದೆ.
ಬಂಧಿತ ಫಿಲಿಫೈನ್ಸ್ ಮೂಲದ ನಾಲ್ವರು, ನಿಷೇಧಿತ ಥುರಾಯಾ ಸ್ಯಾಟಲೈಟ್ ಫೋನ್ ಗಳನ್ನು ಬಳಕೆ ಮಾಡುತ್ತಿದ್ದು, ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಕೂಡಲೇ ನಾಲ್ವರನ್ನು ಬಂಧನಕ್ಕೊಳಪಡಿಸಿ ವಿಚಾರಣೆ ನಡೆಸುತ್ತಿದ್ದಾರೆ.
ನಿಷೇಧಿತ ಈ ಸ್ಯಾಟಲೈಟ್ ಫೋನ್ ಜಮ್ಮು ಮತ್ತು ಕಾಶ್ಮೀರದ ಉಗ್ರ ಸಂಘಟನೆಗಳು ಬಳಕೆ ಮಾಡುತ್ತಿದ್ದವು. 26/11 ಮುಂಬೈ ಉಗ್ರ ದಾಳಿ ಬಳಿಕ ಈ ಸ್ಯಾಟಲೈಟ್ ಫೋನ್ ಗಳ ಮೇಲೆ ನಿಷೇಧ ಹೇರಲಾಗಿತ್ತು.
ಬಂಧಿತ ನಾಲ್ವರನ್ನು ಶೀಘ್ರದಲ್ಲಿಯೇ ಛತ್ರಾಪುರದ ಎಸ್ ಡಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Comments are closed.