ರಾಷ್ಟ್ರೀಯ

125 ಕೋಟಿ ಕಪ್ಪು ಹಣ ಘೋಷಿಸಿಕೊಂಡ ದೆಹಲಿ ವಕೀಲ

Pinterest LinkedIn Tumblr

noteನವದೆಹಲಿ: ಉದ್ಯಮಿಗಳು, ರಾಜಕಾರಣಿಗಳು ಕೋಟಿಗಟ್ಟಲೆ ಕಪ್ಪು ಹಣವನ್ನು ಘೋಷಿಸಿಕೊಂಡರೆ ಅಂತಹ ಮಹಾನ್ ವಿಷಯವೇನಲ್ಲ ಆದರೆ ದೆಹಲಿಯ ವಕೀಲರೊಬ್ಬರು ಬರೋಬ್ಬರಿ 125 ಕೋಟಿ ರುಪಾಯಿ ಕಪ್ಪು ಹಣವನ್ನು ಘೋಷಿಸಿಕೊಂಡಿರುವುದು ರಾಷ್ಟ್ರ ರಾಜಧಾನಿಯ ಕಾನೂನು ಹಾಗೂ ಆದಾಯ ತೆರಿಗೆ ಇಲಾಖಾ ವಲಯಗಳಲ್ಲಿ ಸಂಚನ ಸೃಷ್ಟಿಸಿದೆ.
ದೆಹಲಿಯ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಲ್ಲಿ ವಕೀಲ ವೃತ್ತಿ ನಡೆಸುತ್ತಿರುವ ಲಾರ್ ಆದಾಯ ತೆರಿಗೆ ಅಧಿಕಾರಿಗಳು ದಕ್ಷಿಣ ದೆಹಲಿಯಲ್ಲಿನ ತನ್ನ ಬಂಗ್ಲೆಯಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡದ್ದನ್ನು ಅನುಸರಿಸಿ ವಕೀಲರು ತತ್ ಕ್ಷಣವೇ 125 ಕೋಟಿ ಕಪ್ಪು ಹಣವನ್ನು ಘೋಷಿಸಿಕೊಂಡಿರುವು ಅಚ್ಚರಿಗೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆ ಮಧ್ಯ ದೆಹಲಿಯಲ್ಲಿ ನೂರು ಕೋಟಿ ರುಪಾಯಿ ಮೊತ್ತದ ಬಂಗ್ಲೆಯೊಂದನ್ನು ಖರೀದಿಸಿ ಸಿಕ್ಕಿಹಾಕಿಕೊಂಡಿದ್ದ. ಇನ್ನು ಐಟಿ ಅಧಿಕಾರಿಗಳು ಈ ವಕೀಲರ ಬಂಗ್ಲೆಯನ್ನು ಶೋಧಿಸಿದಾಗ ಅವರಿಗೆ ಆತನ ಇನ್ನೂ ಬೇರೆ ಬೇರೆ ಆಸ್ತಿಪಾಸ್ತಿಗಳ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಸರ್ಕಾರ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿನ ಉನ್ನತ ಮಟ್ಟದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಿಸಿಕೊಡುವ ಸಲಹೆಗಾರರು, ಸೇವಾದಾರರು, ಸಮಾಲೋಚಕರು ಮುಂತಾಗಿ ವಿವಿಧ ಬಗೆಯ ಮಧ್ಯವರ್ತಿಗಳ ಆದಾಯದ ಮೇಲೆ ಐಟಿ ಅಧಿಕಾರಿಗಳು ಕಣ್ಣಿಟ್ಟಿದ್ದು, ಈ ಮಧ್ಯೆ ವಕೀಲರು 125 ಕೋಟಿ ಕಪ್ಪು ಹಣ ಘೋಷಿಸಿಕೊಂಡಿದ್ದಾರೆ.

Comments are closed.