ರಾಷ್ಟ್ರೀಯ

350 ಯುವತಿಯರನ್ನು ಮದುವೆಯಾಗಿ ವಂಚಿಸಿದಾತನ ಬಂಧನ

Pinterest LinkedIn Tumblr

marriageಹೈದರಾಬಾದ್: ಮೃದು ಭಾಷಿಕ ಕೆ.ವೆಂಕಟ್‌ರತ್ನ ರೆಡ್ಡಿಯ ಜೀವನಗಾಥೆ ಯಾವುದೇ ಸಿನೆಮಾ ಕಥೆಗೂ ಕಡಿಮೆಯಿಲ್ಲ. ಬಾಲಿವುಡ್‌ನ ಲೇಡಿಸ್ ವರ್ಸೆಸ್ ರಿಕಿ ಬಾಹ್ಲ್ ಚಿತ್ರದಲ್ಲಿ ರಣವೀರ್ ಸಿಂಗ್ ಪಾತ್ರವನ್ನು ರೆಡ್ಡಿ ಮೀರಿಸಿದ್ದಾನೆ.

ನೂರಾರು ಯುವತಿಯರೊಂದಿಗೆ ವಿವಾಹವಾಗಿ ವಂಚಿಸಿ ಪರಾರಿಯಾದ ಖ್ಯಾತಿ ಇತನ ಮೇಲಿತ್ತು. ಕೊನೆಗೂ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ಜೀವನಗಾಥೆಗೆ ಅಂತಿಮ ತೆರೆ ಎಳೆದಿದ್ದಾರೆ.

ಹೈದ್ರಾಬಾದ್‌ನ ಅಪರಾಧ ದಳ ವಿಭಾಗದ ಪೊಲೀಸರು ವಿವಾಹದ ನೆಪದಲ್ಲಿ ಮಹಿಳೆಯೊಬ್ಬರನ್ನು ವಂಚಿಸುತ್ತಿರುವಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಪೊಲೀಸರು ಆರೋಪಿ ರೆಡ್ಡಿಯನ್ನು ವಿಚಾರಣೆ ನಡೆಸಿದಾಗ ಮ್ಯಾಟ್ರಿಮೋನಿಯಲ್ ಸೈಟ್ (ವೈವಾಹಿಕ ತಾಣಗಳು) ಮೂಲಕ ಯುವತಿಯರನ್ನು ಸಂಪರ್ಕಿಸುತ್ತಿರುವುದಾಗಿ ತಿಳಿಸಿದ್ದಾನೆ.

ಅಮೆರಿಕದಲ್ಲಿ ನೆಲೆಸಿರುವ ಕುಟುಂಬದ ದೂರನ್ನು ಆಧರಿಸಿ ಪೊಲೀಸರು ರೆಡ್ಡಿಯನ್ನು ಆಂಧ್ರಪ್ರದೇಶಧ ಗುಂಟೂರು ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಹಲವು ಪ್ರಕರಣಗಳಲ್ಲಿ ಆರೋಪಿ ಬೇಕಾಗಿದ್ದ ಎಂದು ಮೂಲಗಳು ತಿಳಿಸಿವೆ.

ಆರೋಪಿ ವೆಂಕಟರೆಡ್ಡಿ ವಿಶಾಖಪಟ್ಟಣದಿಂದ ಅಮೆರಿಕಾಗೆ ತೆರಳಲು ಪಾಸ್‌ಪೋರ್ಟ್ ಮತ್ತು ವೀಸಾ ಪಡೆದಿದ್ದ. ಅಮೆರಿಕಕ್ಕೆ ತೆರಳಿದ ನಂತರ, ವಿವಾಹಿತ ರೆಡ್ಡಿ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ತನ್ನ ಪ್ರೋಫೈಲ್ ಅಪ್ಲೋಡ್ ಮಾಡಿ ವಧುಗಳ ಹುಡುಕಾಟದಲ್ಲಿ ತೊಡಗಿದ್ದ.

ಆರೋಪಿಯ ಬಲೆಗೆ ಬಿದ್ದ ಅನಿವಾಸಿ ಭಾರತೀಯ ಕುಟುಂಬದ ಯುವತಿಯೊಬ್ಬಳು ರೆಡ್ಡಿಯೊಂದಿಗೆ ವಿವಾಹಕ್ಕೆ ಮುಂದಾಗಿದ್ದಳು, ಆಕೆಯೊಂದಿಗೆ ವಿವಾಹವಾದ ಕೇವಲ 20 ದಿನಗಳಲ್ಲಿ ಪತ್ನಿಯ ಕುಟುಂಬಕ್ಕೆ 20 ಲಕ್ಷ ರೂಪಾಯಿ ವಂಚಿಸಿದ್ದ. ಇತರ ಹಲವಾರು ಯುವತಿಯರನ್ನು ವಿವಾಹವಾಗುವುದಾಗಿ ವಂಚಿಸಿ ಕಾಲು ಕಿತ್ತಿದ್ದ.

ಪ್ರಸಕ್ತ ತಿಂಗಳ ಆರಂಭದಲ್ಲಿ ಅನಿವಾಸಿ ಭಾರತೀಯ ಕುಟುಂಬದವರು ಪೊಲೀಸರನ್ನು ಸಂಪರ್ಕಿಸಿ ರೆಡ್ಡಿಯ ವಂಚನೆ ಬಗ್ಗೆ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ರೆಡ್ಡಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರು ಆರೋಪಿ ರೆಡ್ಡಿ ಮತ್ತಷ್ಟು ಯುವತಿಯರನ್ನು ವಂಚಿಸಿರಬಹುದು ಎಂದು ಶಂಕಿಸಿ ಥರ್ಡ್ ಡಿಗ್ರಿ ಪ್ರಯೋಗ ಮಾಡಿದಾಗ ಸುಮಾರು 350ಕ್ಕೂ ಹೆಚ್ಚು ಮಹಿಳೆಯರನ್ನು ವಂಚಿಸಿರುವುದು ಬಹಿರಂಗವಾಗಿದೆ. ಇದೀಗ ಕೆನಡಾದ ಮಹಿಳೆಯನ್ನು ವಂಚಿಸಲು ಸಿದ್ದತೆ ನಡೆಸುತ್ತಿರುವಾಗ ರೆಡ್ಡಿ ಪೊಲೀಸರ ಖೆಡ್ಡಾಗೆ ಬಿದ್ದಿದ್ದಾನೆ.

Comments are closed.