ರಾಷ್ಟ್ರೀಯ

ಮತ್ತೊಂದು ವಿವಾದದ ಸುಳಿಯಲ್ಲಿ ಸಿಲುಕಿಕೊಂಡ ಸ್ವಯಂ ಘೋಷಿತ ದೇವ ಮಹಿಳೆ ರಾಧೆ ಮಾ ! ಶೂ ಧರಿಸಿ ಗಂಗಾ ಪೂಜೆ

Pinterest LinkedIn Tumblr

radhe-maa-ganga

ಹರಿದ್ವಾರ: ತುಂಡುಡುಗೆ ಧರಿಸಿ ವಿವಾದಕ್ಕೀಡಾಗಿದ್ದ ಸ್ವಯಂ ಘೋಷಿತ ದೇವ ಮಹಿಳೆ ರಾಧೆ ಮಾ ಇದೀಗ ಮತ್ತೊಂದು ವಿವಾದದ ಸುಳಿಯಲ್ಲಿ ಸಿಲುಕಿಕೊಂದಿದ್ದಾರೆ. ಹರಿದ್ವಾರದಲ್ಲಿ ನಡೆದ ಗಂಗಾ ಪೂಜೆ ವೇಳೆ ರಾಧೆ ಮಾ ಅವರು ಕಾಲಿಗೆ ಶೂ ಧರಿಸಿ ಗಂಗಾ ಆರತಿ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಮುಂಬೈ ನಲ್ಲಿ ಎರಡು ದಿನಗಳ ಧಾರ್ಮಿಕ ಯಾತ್ರೆ ನಡೆಯಲಿದ್ದು, ಹರಿದ್ವಾರಕ್ಕೆ ರಾಧೆ ಮಾ ನಿನ್ನೆ ಭೇಟಿ ನೀಡಿದ್ದರು. ಈ ವೇಳೆ ಗಂಗಾ ಪೂಜೆಯಲ್ಲಿ ಭಾಗಿಯಾಗಿದ್ದ ಅವರು ಕಾಲಿಗೆ ಶೂ ತೆಗೆಯದೆಯೇ ಆರತಿ ಮಾಡಿದ್ದಾರೆ. ಅಲ್ಲದೆ, ಸ್ಥಳದಲ್ಲಿ ಅಶ್ಲೀಲವಾಗಿ ನೃತ್ಯ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ರಾಧೆ ಮಾ ಅವರ ಈ ವರ್ತನೆಗೆ ಅರ್ಚಕರು ಹಾಗೂ ಹಿಂದೂ ಪರ ಸಮುದಾಯಗಳು ಅಕ್ರೋಶ ವ್ಯಕ್ತಪಡಿಸುತ್ತಿದ್ದು, ರಾಧೆ ಮಾ ಅವರು ಗಂಗಾ ಆರತಿಯ ಪಾವಿತ್ರ್ಯತೆಯನ್ನು ಉಲ್ಲಂಘಿಸಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.

ರಾಧೆ ಮಾ ಅವರು ಶೂ ಧರಿಸಿ ಗಂಗಾ ಆರತಿ ಮಾಡುತ್ತಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು, ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ. ಫೋಟೋದಲ್ಲಿರುವ ಪ್ರಕಾರ ರಾಧೆ ಮಾ ಅವರು ಹರಿದ್ವಾರದ ಮೆಟ್ಟಿಲ ಮೇಲೆ ಕೆಂಪು ಶೂ ಧರಿಸಿ ನಿಂತು ಗಂಗಾ ಆರತಿ ಮಾಡುತ್ತಿರುವುದು ಕಂಡು ಬಂದಿದೆ.

Comments are closed.