ನವದೆಹಲಿ: ಪಾಕಿಸ್ತಾನ ದೇಶ ಭಯೋತ್ಪಾದನೆಯ ಮಾತೃಭೂಮಿಯಾಗಿದ್ದು, ಬ್ರಿಕ್ಸ್ ರಾಷ್ಟ್ರಗಳು ಒಂದುಗೂಡಿ ಭಯೋತ್ಪಾದನೆ ವಿರುದ್ಧ ಹೋರಾಡಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ಗೋವಾದಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯುತ್ತಿದ್ದು, ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಪ್ರಿಕಾ ದೇಶಗಳ ನಾಯಕರೊಂದಿಗಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತುಕತೆ ನಡೆಸಿದ್ದಾರೆ. ಮಾತುಕತೆ ವೇಳೆ ಪ್ರಧಾನಿ ಮೋದಿಯವರು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿರುವ ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದಾರೆ.
ಪಾಕಿಸ್ತಾನ ದೇಶ ಭಯೋತ್ಪಾದನೆಯ ಮಾತೃಭೂಮಿಯಾಗಿದ್ದು, ಭಯೋತ್ಪಾದನೆ ವಿರುದ್ಧ ಬ್ರಿಕ್ಸ್ ರಾಷ್ಟ್ರಗಳು ಒಂದುಗೂಡಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ದೇಶವನ್ನು ಶಿಕ್ಷಿಸಬೇಕಿದೆ ಎಂದಿದ್ದಾರೆ.
ಪಾಕಿಸ್ತಾನ ಕೇವಲ ಭಯೋತ್ಪಾದನೆಗೆ ಆಶ್ರಯವನ್ನಷ್ಟೇ ನೀಡುತ್ತಿಲ್ಲ, ರಾಜಕೀಯ ಲಾಭಕ್ಕಾಗಿ ಭಯೋತ್ಪಾದನೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿದೆ. ಇಂತರ ಬೆಳವಣಿಗೆಗಳು ನಮ್ಮ ಆರ್ಥಿಕ ಬೆಳವಣಿಗೆಗಳಿಗೆ ಅಪಾಯಗಳನ್ನು ತಂದೊಡ್ಡಲಿದೆ. ಭಯೋತ್ಪಾದನೆಯನ್ನು ಪ್ರಚೋದಿಸುತ್ತಿರುವ ದೇಶ ನಮ್ಮ ನೆರೆರಾಷ್ಟ್ರವಾಗಿರುವ ನಮ್ಮ ದುರ್ದೈವವಾಗಿದೆ ಎಂದು ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿಯವರು ಹೇಳಿದ್ದಾರೆ.
ಇಂತರ ಮನಸ್ಥಿತಿಯುಳ್ಳವರನ್ನು ನಾವು ಖಂಡಿಸಬೇಕಿದೆ. ಭಯೋತ್ಪಾದನೆ ವಿರುದ್ಧ ಹೋರಾಡಲು ಬ್ರಿಕ್ಸ್ ರಾಷ್ಟ್ರಗಳು ಒಂದುಗೂಡಿ ಎದ್ದು ನಿಲ್ಲಿಸಬೇಕಿದೆ. ಬೆದರಿಕೆಗಳ ವಿರುದ್ಧ ನಮ್ಮ ಧ್ವನಿ ಏರಬೇಕಿದೆ ಎಂದಿದ್ದಾರೆ.