ರಾಷ್ಟ್ರೀಯ

ಮಸೂದ್ ಅಜರ್‌ನನ್ನು ಚೀನಾ ಬೆಂಬಲಿಸಿದರೆ ಮುಂಬರುವ ದಿನಗಳಲ್ಲಿ ಪಶ್ಚಾತಾಪ ಪಡಬೇಕಾಗುತ್ತದೆ: ಬಿಜೆಪಿ

Pinterest LinkedIn Tumblr

masood-azhar11ನವದೆಹಲಿ: ಜೈಷ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನನ್ನು ಬೆಂಬಲಿಸುತ್ತಿರುವುದಕ್ಕೆ ಮುಂಬರುವ ದಿನಗಳಲ್ಲಿ ಪಶ್ಚಾತಾಪ ಪಡಬೇಕಾಗುತ್ತದೆ ಎಂದು ಬಿಜೆಪಿ ಚೀನಾಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಕೇಂದ್ರ ಸರಕಾರ ಮಸೂದ್ ಅಜರ್ ವಿರುದ್ಧ ಕ್ರಮಕ್ಕೆ ಮುಂದಾದಲ್ಲಿ ಚೀನಾ ತಡೆಯುವ ಪ್ರಯತ್ನ ಮಾಡುತ್ತಿದೆ. ಚೀನಾ ಒಂದಿಲ್ಲೊಂದು ದಿನ ಪಶ್ಚಾತಾಪ ಪಡಬೇಕಾಗುತ್ತದೆ. ಉಗ್ರರು ಚೀನಾ ದೇಶಕ್ಕಾಗಲಿ ಅಥವಾ ವಿಶ್ವಕ್ಕಾಗಲಿ ಯಾವುದೇ ಪ್ರಯೋಜನವಿಲ್ಲ ಎಂದು ಬಿಜೆಪಿ ವಕ್ತಾರ ಶಹಾನವಾಜ್ ಹುಸೈನ್ ಹೇಳಿದ್ದಾರೆ.

ಬಾರತ ಸದಾ ಚೀನಾದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಆದಾಗ್ಯೂ ಕೆಲ ವಿಷಯಗಳಲ್ಲಿ ಚೀನಾ ಮತ್ತು ಭಾರತದ ಮಧ್ಯೆ ವಿವಾದಗಳಿಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಠಾನ್‌ಕೋಟ್ ದಾಳಿಯ ರೂವಾರಿ ಮಸೂದ್ ಅಜರ್ ವಿರುದ್ಧ ವಿಶ್ವಸಂಸ್ಥೆಯಲ್ಲಿ ಕ್ರಮ ತೆಗೆದುಕೊಳ್ಳಲು ಮುಂದಾದಾಗ ವಿಟೋ ಚಲಾಯಿಸಿ ಚೀನಾ ಅದಕ್ಕೆ ತಡೆಯೊಡ್ಡಿತ್ತು.

Comments are closed.