ರಾಷ್ಟ್ರೀಯ

ನವಾಜುದ್ದಿನ್ ಸಿದ್ಧಿಕಿ ಅಭಿನಯದ ‘ರಾಮ್‌ಲೀಲಾ’ ನಾಟಕಕ್ಕೆ ಧಾರ್ಮಿಕ ಸಂಘಟನೆಗಳ ವಿರೋಧ

Pinterest LinkedIn Tumblr

Nawazuddin Siddiquiಮುಜಾಫರ್‌ನಗರ: ಹಿಂದೂ ಧಾರ್ಮಿಕ ಸಂಘಟನೆಗಳ ಕಾರ್ಯಕರ್ತರ ವ್ಯಾಪಕ ವಿರೋಧದಿಂದಾಗಿ ಬಾಲಿವುಡ್‌ನ ಜನಪ್ರಿಯ ನಟ ನವಾಜುದ್ದೀನ್ ಸಿದ್ಧಿಕಿ ತಮ್ಮ ‘ರಾಮ್‌ಲೀಲಾ’ ನಾಟಕ ಕಾರ್ಯಕ್ರಮವನ್ನು ರದ್ದುಪಡಿಸಿದ್ದಾರೆ.

ಉತ್ತರ ಪ್ರದೇಶದ ಬೂಧಾನ್ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ರಾಮಾಯಣದ ವನವಾಸ ಸನ್ನಿವೇಶದ ಮೇಲೆ ಬೆಳಕು ಚೆಲ್ಲುವ ‘ರಾಮ್‌ಲೀಲಾ’ ಎಂಬ ನಾಟಕ ಪ್ರದರ್ಶಿಸಲು ಸಿದ್ಧತೆ ನಡೆದಿತ್ತು. ಈ ನಾಟಕದಲ್ಲಿ ಸಿದ್ಧಿಕಿ ಅವರು ‘ಮಾರಿಚಾ’ ಎಂಬ ರಾಕ್ಷಸನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದರು.

ಸನ್ನಿವೇಶವೊಂದರಲ್ಲಿ ಹಿಂದೂಗಳ ಆರಾಧ್ಯ ದೈವ ಶ್ರೀರಾಮಚಂದ್ರನ ಪತ್ನಿ ಸೀತಾಮಾತೆಯನ್ನು ಅಪಹರಿಸುವ ಸಂದರ್ಭದಲ್ಲಿ ಸಿದ್ಧಿಕಿ(ಮಾರಿಚಾ) ಮುಖ್ಯ ಪಾತ್ರ ನಿರ್ವಹಿಸಲ್ಲಿದ್ದಾರೆ ಎಂಬ ಕಾರಣಕ್ಕೆ ಸ್ಥಳೀಯ ಹಿಂದೂ ಧರ್ಮ ಸಂಘಟನೆಯ ಕಾರ್ಯಕರ್ತರು ವಿರೋಧಿಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.