ರಾಷ್ಟ್ರೀಯ

ಸರ್ಜಿಕಲ್‌ದಾಳಿ ಬಗ್ಗೆ ವಿಡಿಯೋ ಪುರಾವೆ ಕೇಳುವ ಕೇಜ್ರಿವಾಲ್‌ ತಮ್ಮ ಹುಟ್ಟಿನ ಪುರಾವೆಗಾಗಿ ಹೆತ್ತವರ ಫಸ್ಟ್ ನೈಟ್ ವಿಡಿಯೋ ನೋಡಲಿ: ಬಿಜೆಪಿ ಶಾಸಕ

Pinterest LinkedIn Tumblr

kejrival

ಭೋಪಾಲ(ಮಧ್ಯಪ್ರದೇಶ) : ಭಾರತೀಯ ಸೇನಾ ಪಡೆ ಪಾಕ್‌ಗಡಿಯೊಳಗೆ ನುಗ್ಗಿ ಪಿಓಕೆಯಲ್ಲಿ ಕೆಚ್ಚೆದೆಯಿಂದ ನಡೆಸಿದ್ದ ಸರ್ಜಿಕಲ್‌ಸ್ಟ್ರೈಕ್‌ಬಗ್ಗೆ ವಿಡಿಯೋ ಪುರಾವೆ ಕೇಳಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಕಾಂಗ್ರೆಸ್‌ನ ಸಂಜಯ್‌ನಿರುಪಮ್‌ಅವರಂತಹ ನಾಯಕರು ‘ತಮ್ಮ ಹುಟ್ಟಿನ ಪುರಾವೆಗಾಗಿ ತಮ್ಮ ಹೆತ್ತವರ ಮದುವೆಯ ಮೊದಲ ರಾತ್ರಿಯ ವಿಡಿಯೋ ನೋಡಲಿ’ ಎಂದು ಹೇಳುವ ಮೂಲಕ ಮೂಲಕ ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ಹೊಸ ವಿವಾದವನ್ನು ಹುಟ್ಟು ಹಾಕಿದ್ದಾರೆ.

“ಭಾರತೀಯ ಸೈನಿಕರು ನಡೆಸಿರುವ ಸರ್ಜಿಕಲ್‌ಸ್ಟ್ರೈಕ್‌ಅನ್ನು ನಂಬಲು ಅದರ ವಿಡಿಯೋ ಕೇಳುವ ಅರವಿಂದ ಕೇಜ್ರಿವಾಲ್‌ಅಥವಾ ಸಂಜಯ್‌ನಿರುಪಮ್‌ಅಥವಾ ಬೇರೆ ಯಾವುದೇ ನಾಯಕರು ತಾವು ತಮ್ಮ ಹೆತ್ತವರಿಗೇ ಹುಟ್ಟಿದವರೆನ್ನುವುದಕ್ಕೆ ಅವರ ಮದುವೆಯ ಮೊದಲ ರಾತ್ರಿಯ ವಿಡಿಯೋವನ್ನು ನೋಡಿಯೇ ನಂಬುವವರಾಗಿದ್ದಾರೆ’ ಎಂದು ಶರ್ಮಾ ಕಿಡಿ ಕಾರಿದರು.

“ಭಾರತೀಯ ಸೈನಿಕರು ತಮ್ಮ ಜೀವ ಮತ್ತು ರಕ್ತವನ್ನು ದೇಶಕ್ಕಾಗಿ ತ್ಯಾಗ ಮಾಡುತ್ತಾರೆ. ಅವರ ಈ ತ್ಯಾಗ ಮತ್ತು ಬಲಿದಾನವನ್ನು ನಂಬದವರು ದೇಶ ದ್ರೋಹಿಗಳೇ ಆಗಿದ್ದಾರೆ. ಅಂತಹವರೆಲ್ಲರೂ ಪಾಕಿಸ್ಥಾನದ ಏಜಂಟರುಗಳು. ಅವರು ನವಾಜ್‌ಷರೀಫ್ ರೀತಿಯಲ್ಲೇ ಮಾತನಾಡುತ್ತಾರೆ’ ಎಂದು ಶರ್ಮಾ ಟೀಕಿಸಿದರು.

Comments are closed.