ರಾಷ್ಟ್ರೀಯ

ಸೀಮಿತ ದಾಳಿ ಕುರಿತ ಮಹತ್ವದ ವಿಡಿಯೋ ಮಾಧ್ಯಮ ಬಿಡುಗಡೆ ಕುರಿತು ನಿರ್ಧಾರ ಸಾಧ್ಯತೆ 

Pinterest LinkedIn Tumblr

army

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಕುರಿತ ಮಹತ್ವದ ವಿಡಿಯೋ ದಾಖಲೆಗಳನ್ನು ಸೇನಾಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ನೀಡಿದ್ದು, ಈ ವಿಡಿಯೋ ದಾಖಲೆಯನ್ನು ಮಾಧ್ಯಮಗಳಿಗೆ ನೀಡಬೇಕೇ ಬೇಡವೆ ಎಂಬ ಅಂಶದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೇ ಅಂತಿಮ ನಿರ್ಧಾರ ಕೈಗೊಳ್ಳಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಈಗಾಗಲೇ ಸೀಮಿತ ದಾಳಿ ಕುರಿತು ವಿಡಿಯೋ ದಾಖಲೆಗಳು ಕೇಂದ್ರ ಸರ್ಕಾರ ತಲುಪಿದ್ದು, ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟಸಭೆ ನಡೆಸಿ ವಿಡಿಯೋ ದಾಖಲೆಗಳನ್ನು ಬಿಡುಗಡೆ ಮಾಡಬೇಕೇ ಅಥವಾ ಇಲ್ಲವೇ ಎಂಬ ಅಂಶದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆ ನಡೆಸಲಿದ್ದಾರೆ. ಬಳಿಕ ತಮ್ಮ ನಿರ್ಧಾವನ್ನು ಪ್ರಕಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಪಾಕಿಸ್ತಾನ ಮೂಲದ ಉಗ್ರರ ವಿರುದ್ಧ ಭಾರತೀಯ ಸೇನೆ ಸೆಪ್ಟೆಂಬರ್ 28 ಬುಧವಾರ ರಾತ್ರಿ ನಡೆಸಿದ್ದ ಸೀಮಿತ ದಾಳಿ ಕುರಿತಂತೆ ಪಾಕಿಸ್ತಾನ ಸರ್ಕಾರ ಸೇರಿದಂತೆ ಆಮ್ ಆದ್ಮಿ ಪಕ್ಷಗಳು ಶಂಕೆ ವ್ಯಕ್ತಪಡಿಸಿದ್ದು, ಈ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಆಗ್ರಹಿಸುತ್ತಿವೆ. ಈ ನಡುವೆ ಪ್ರತಿಪಕ್ಷ ಕಾಂಗ್ರೆಸ್ ಸೀಮಿತ ದಾಳಿ ನಡೆದಿದೆ ಎಂದು ಒಪ್ಪಿಕೊಳ್ಳುತ್ತಿದೆಯಾದರೂ ಸಾಕ್ಷ್ಯಾಧಾರಗಳನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿರುವ ಸೇನೆ ಸೀಮಿತ ದಾಳಿ ನಡೆದಿರುವುದು ನಿಜ ಎಂದು ಹೇಳಿದೆ.

ಸೆಪ್ಟೆಂಬರ್ 28 ರ ಬುಧವಾರ ರಾತ್ರಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನಮ್ಮ ವಿಶೇಷ ಪಡೆಗಳು ನುಗ್ಗಿ ಅಲ್ಲಿದ್ದ ಸುಮಾರು 7 ಉಗ್ರ ನೆಲೆಗಳನ್ನು ಧ್ವಂಸಗೊಳಿಸಿವೆ. ಈ ವೇಳೆ 50 ಉಗ್ರರನ್ನು ಹಾಗೂ ಅವರನ್ನು ರಕ್ಷಿಸಲು ಬಂದ ಪಾಕಿಸ್ತಾನದ 6 ಮಂದಿ ಸೈನಿಕರನ್ನು ಕೊಲ್ಲಲಾಗಿದೆ ಎಂದು ಹೇಳಿದೆ.

Comments are closed.