
ಚೆನ್ನೈ:ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.
ಜಯಾ ಚಿಕಿತ್ಸೆಗಾಗಿ ಲಂಡನ್‌ನಿಂದ ರಿಚರ್ಡ್ ಜಾನ್ ಬೀಲ್ ನೇತೃತ್ವದ ವೈದ್ಯರ ತಂಡ ಶನಿವಾರ ಚೆನ್ನೈ ಅಪೋಲೊ ಆಸ್ಪತ್ರೆಗೆ ಧಾವಿಸಿತ್ತು. ಈ ವೈದ್ಯರ ಚಿಕಿತ್ಸೆಗೆ ಜಯಾ ಸ್ಪಂದಿಸುತ್ತಿದ್ದು, ಅವರ ಆರೋಗ್ಯ ಸುಧಾರಿಸುತ್ತಿದೆ.
ನ್ಯುಮೋನಿಯಾ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಜಯಾ ಅವರ ಹೃದಯ ಮತ್ತು ಕಿಡ್ನಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.ಈ ಕಾರಣದಿಂದಾಗಿ ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.
ಭಾನುವಾರ ಬೆಳಗ್ಗಿನಿಂದ ಜಯಲಲಿತಾ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಅಪೋಲೊ ಆಸ್ಪತ್ರೆಯ ಸುತ್ತಲೂ ಎಐಎಡಿಎಂಕೆ ಕಾರ್ಯಕರ್ತರು ಜಮಾಯಿಸಿದ್ದು, ವಿತ್ತ ಸಚಿವ ಪನೀರ್ ಸೆಲ್ವಂ, ಗೆಳತಿ ಶಶಿಕಲಾ ಮೊದಲಾದವರು ಆಸ್ಪತ್ರೆಯಲ್ಲಿ ಜಯಾ ಅವರ ಜತೆಗಿದ್ದಾರೆ.
Comments are closed.