ರಾಷ್ಟ್ರೀಯ

ಸುಜೆಟ್ಟಾ ಜೋರ್ಡನ್ ಸಾಮೂಹಿಕ ಅತ್ಯಾಚಾರದ ಪ್ರಮುಖ ಆರೋಪಿ ಬಂಧನ

Pinterest LinkedIn Tumblr

parkstreetದೆಹಲಿ: ಕೊಲ್ಕತ್ತಾದ ಪಾರ್ಕ್ ಸ್ಟ್ರೀಟ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಖಾದೆರ್ ಖಾನ್ ಅವರನ್ನು ನಾಲ್ಕು ವರ್ಷಗಳ ಬಳಿಕ ಬಂಧಿಸಲಾಗಿದೆ.

ಗುರುವಾರ ದೆಹಲಿಯಲ್ಲಿ ಖಾನ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅದೇ ವೇಳೆ ಖಾನ್ ಜತೆ ಅಡಗಿದ್ದ ಇನ್ನೊಬ್ಬ ವ್ಯಕ್ತಿಯನ್ನೂ ಪೊಲೀಸರು ಬಂಧಿಸಿದ್ದು, ಇವರಿಬ್ಬರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು. ಇದಾದನಂತರ ಕೊಲ್ಕತ್ತಾಕ್ಕೆ ಕರೆತರಲಾಗುವುದು.

ಪ್ರಸ್ತುತ ಪ್ರಕರಣದ ವಿಚಾರಣೆ 2015ರಲ್ಲಿ ಅಂತ್ಯಗೊಂಡಿದ್ದು, ನಾಸಿರ್ ಖಾನ್, ರುಮಾನ್ ಖಾನ್ ಮತ್ತು ಸುಮಿತ್ ಬಜಾಜ್ ಎಂಬವರನ್ನು ಅಪರಾಧಿಗಳೆಂದು ಘೋಷಿಸಲಾಗಿತ್ತು, ಆ ಮೂವರು ಅಪರಾಧಿಗಳಿಗೆ 10 ವರ್ಷ ಕಾರಾಗೃಹ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿತ್ತು, ಇದರಲ್ಲಿ ಅಪರಾಧಿಗಳು ಈಗಾಗಲೇ 4 ವರ್ಷ ಶಿಕ್ಷೆಯನ್ನು ಅನುಭವಿಸಿಯಾಗಿದೆ.

ಏನಿದು ಘಟನೆ?: 2012 ಫೆಬ್ರವರಿ 20ರಂದು ಪಾರ್ಕ್ ಸ್ಟ್ರೀಟ್ ನಲ್ಲಿ ಚಲಿಸುತ್ತಿರುವ ಕಾರಿನಲ್ಲಿ ಸುಜೆಟ್ಟಾ ಜೋರ್ಡನ್ ಎಂಬವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು, ಆ ಘಟನೆಯ ನಂತರ ಅತ್ಯಾಚಾರಕ್ಕೊಳಗಾದ ಮಹಿಳೆಯರ ಸಹಾಯಕ್ಕಾಗಿ ಹೋರಾಟ ನಡೆಸಿದ ಜೋರ್ಡನ್, ಮಹಿಳಾ ಹಕ್ಕುಗಳ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸಿದರು. ಮಾರ್ಚ್ 13, 2015ರಂದು ಜೋರ್ಡನ್ ಮೃತರಾದರು.

ವಿವಾದ:ಈ ಪ್ರಕರಣ ಸುದ್ದಿಯಾಗುತ್ತಿದ್ದಂತೆ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಕರಣವನ್ನುದ್ದೇಶಿಸಿ ಇದೊಂದು ನಾಟಕೀಯ ಕೃತ್ಯ ಎಂದು ಹೇಳಿದ್ದು ವಿವಾದಕ್ಕೀಡಾಗಿತ್ತು.

Comments are closed.