
ನವದೆಹಲಿ: ಭಾರತೀಯ ಸೇನಾಪಡೆಯ ನಿರ್ದಿಷ್ಟ ದಾಳಿ ನಡುವೆ ಪಾಕಿಸ್ತಾನ ಸೇನೆ ಎಂಟು ಭಾರತೀಯ ಯೋಧರನ್ನು ಹತ್ಯೆಗೈದಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾದುದು. ಪಾಕಿಸ್ತಾನ ಅಕ್ರಮಿತ ಕಾಶ್ಮೀರದಲ್ಲಿ ನಡೆದ ದಾಳಿಯಲ್ಲಿ ಪಾಕ್ ಸೇನೆ ಭಾರತೀಯ ಯೋಧರನ್ನು ಹತ್ಯೆಗೈದಿದೆ ಮತ್ತು ಒಬ್ಬ ಯೋಧನನ್ನು ವಶ ಪಡಿಸಿದೆ ಎಂಬುದು ಸುಳ್ಳು ಸುದ್ದಿ. ಇಂಥಾ ಸುಳ್ಳು ಸುದ್ದಿಯನ್ನು ಪಾಕಿಸ್ತಾನದ ಮಾಧ್ಯಮಗಳು ಬಿತ್ತರಿಸುತ್ತಿದ್ದು, ಪಾಕ್ ಮಾಧ್ಯಮಗಳು ತೋರಿಸುತ್ತಿರುವ ದೃಶ್ಯಗಳು ‘ತಿರುಚಲ್ಪಟ್ಟ’ ‘ನಕಲಿ’ ಚಿತ್ರಗಳಾಗಿವೆ ಎಂದು ಭಾರತೀಯ ಸೇನೆ ಹೇಳಿದೆ.
ಗಡಿ ನಿಯಂತ್ರಣ ರೇಖೆಯನ್ನು ದಾಟುತ್ತಿದ್ದ ವೇಳೆ ನೆಲಬಾಂಬ್‍ನಿಂದಾಗಿ ನಮ್ಮ ಯೋಧನೊಬ್ಬನಿಗೆ ಸಣ್ಣ ಪುಟ್ಟ ಗಾಯವಾಗಿದೆಯೇ ಹೊರತು ಬೇರೆ ಯಾವ ರೀತಿಯ ಸಾವು ನೋವುಗಳು ಸಂಭವಿಸಿಲ್ಲ ಎಂದು ಭಾರತೀಯ ಸೇನಾಪಡೆಯ ಮೂಲಗಳು ಸ್ಪಷ್ಟನೆ ನೀಡಿವೆ.
ಏತನ್ಮಧ್ಯೆ, ಭಾರತೀಯ ಸೇನೆಯ ಯೋಧರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕ್ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡುತ್ತಿವೆ. ಅಲ್ಲಿ ತೋರಿಸುವ ಸುದ್ದಿ ಸುಳ್ಳಾಗಿದ್ದು, ಅಲ್ಲಿರುವ ಚಿತ್ರ ಮತ್ತು ದೃಶ್ಯಗಳು ನಕಲಿಯಾಗಿವೆ ಎಂದು ಭಾರತೀಯ ಸೇನಾಮೂಲಗಳು ಹೇಳಿವೆ,
Comments are closed.