ರಾಷ್ಟ್ರೀಯ

ಪಾಕ್ ಜೊತೆ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ರದ್ದುಗೊಳಿಸಲು ಕೇಂದ್ರ ನಿರ್ಧಾರ

Pinterest LinkedIn Tumblr

sindu

ನವದೆಹಲಿ(ಸೆ.26): ಪಾಕಿಸ್ತಾನ ಭಯೋತ್ಪಾದನೆಯ ಪ್ರಾಯೋಜಕತ್ವವನ್ನು ನಿಲ್ಲಿಸುವವರೆಗೂ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ರದ್ದುಗೊಳಿಸಲು ಭಾರತ ಸರ್ಕಾರ ನಿರ್ಧರಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೇತ್ವದಲ್ಲಿ ಇಂದು ನಡೆದ ಸಿಂಧು ನದಿ ಒಪ್ಪಂದ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಪಾಕ್ ಭಯೋತ್ಪಾದನೆಯನ್ನು ಅಂತ್ಯಗೊಳಿಸುವವರೆಗೂ ಒಪ್ಪಂದ ರದ್ದುಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ರಕ್ತ ಮತ್ತು ನೀರನ್ನು ಒಟ್ಟಿಗೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಪಾಕ್’ಗೆ ಖಡಕ್ ಸೂಚನೆ ನೀಡಿದ್ದಾರೆ.
1960ರಲ್ಲಿ ನೆಹರು ಪ್ರಧಾನಿಯಾಗಿದ್ದಾಗ ನಡೆದಿದ್ದ ಒಪ್ಪಂದವಾಗಿತ್ತು. ಸಿಂಧೂ ನದಿ ಕಣಿವೆಯಲ್ಲಿ ನಾಲ್ಕು ಜಲಾಶಯ ನಿರ್ಮಾಣಕ್ಕೆ ಸಭೆ ಒಲವು ತೋರಿದ್ದು, ಚೀನಾಬ್, ಪಾಕುಲ್ ದುಲ್ ಡ್ಯಾಂ, ಸ್ವಾಲ್ಕೋಟ್, ಬರ್ಸಾರ್ನಲ್ಲಿ ಜಲಾಶಯ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಪ್ರಸ್ತುತವಿರುವ ಒಪ್ಪಂದವನ್ನು ರದ್ದು ಮಾಡಿ ನೀರನ್ನು ಭಾರತದಲ್ಲೇ ಬಳಸಿಕೊಳ್ಳಲು ಪ್ರಧಾನಿ ನೇತೃತ್ಬದ ಸಭೆ ನಿರ್ಧರಿಸಿದೆ.
ಉರಿ ಘಟನೆ ರದ್ದತಿಗೆ ಕಾರಣ
ಕಾಶ್ಮೀರದ ಉರಿ ಪ್ರದೇಶದ ಮೇಲೆ ಸೆ.18 ರಂದು ಪಾಕ್ ಭಯೋತ್ಪಾದಕ ದಾಳಿ ಮಾಡಿದ್ದು 18 ಮಂದಿ ಸೈನಿಕರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ 1960 ರಲ್ಲಿ ಮಾಡಿಕೊಂಡ ಸಿಂಧುನದಿ ಜಲ ಒಪ್ಪಂದವನ್ನು ರದ್ದುಗೊಳಿಸಲಾಗಿದೆ.
ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್, ಜಲ ಸಂಪನ್ಮೂಲ ಕಾರ್ಯದರ್ಶಿ ಶಶಿ ಶೇಖರ್ ಅವರ ಜೊತೆಯು ಪ್ರಧಾನಿ ಸಮಾಲೋಚನೆ ನಡೆಸಿದ್ದಾರೆ. ಸಂಸತ್’ ನಲ್ಲಿ ಚರ್ಚಿಸಿದ ಬಳಿಕ ಒಪ್ಪಂದ ರದ್ದತಿಗೆ ಅಂತಿಮ ಸಹಿ ಬೀಳಲಿದೆ.

Comments are closed.