ಬೆಂಗಳೂರು,ಸೆ.15-ಕಾವೇರಿ ನೀರಿಗಾಗಿ ಕನ್ನಡಿಗರು ಹೋರಾಟ ನಡೆಸುತ್ತಿದ್ದರೆ ಅತ್ತ ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಅವರು ತಮಿಳುನಾಡಿನಿಂದ ಕರ್ನಾಟಕಕ್ಕೆ ಯಾವುದೇ ಲಾರಿಗಳು ಪ್ರವೇಶಿಸ ದಂತೆ ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.
ಜಯಲಲಿತ ಅವರ ಈ ಕ್ರಮ ದಿಂದಾಗಿ ತಮಿಳುನಾಡಿನಿಂದ ಮತ್ತು ತಮಿಳುನಾಡು ಮಾರ್ಗ ವಾಗಿ ಯಾವುದೇ ಲಾರಿಗಳು ಕರ್ನಾಟಕ ದೊಳಕ್ಕೆ ಪ್ರವೇಶಿಸುವಂತಿಲ್ಲ. ಇದರಿಂದ ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತಗೊಳ್ಳಲಿದೆ.
ತಮಿಳುನಾಡು ಮಾರುಕಟ್ಟೆಗಳಿಂದ ಪ್ರತಿದಿನ ಆಹಾರ ಧಾನ್ಯಗಳು, ತರಕಾರಿ ಹಣ್ಣು, ಹೂವು, ಸ್ಟೇಷನರಿ ವಸ್ತುಗಳು, ಸಿದ್ಧ ಉಡುಪುಗಳು ಸೇರಿದಂತೆ ನಾನಾ ಬಗೆಯ ಸರಕುಗಳು ತಮಿಳುನಾಡು ಕಡೆಯಿಂದ ಪೂರೈಕೆಯಾಗುತ್ತಿದ್ದವು. ಆದರೆ ಜಯಲಲಿತ ಅವರ ಧೋರಣೆಯಿಂದ ಈಗ ಅವೆಲ್ಲವೂ ಬಂದ್ ಆದಂತಾಗಿದೆ.
Comments are closed.