ನವದೆಹಲಿ: ಎಂಟು ವರ್ಷಗಳಲ್ಲಿ ದೇಶದಲ್ಲಿ ಆಗಿರುವ ವೇತನ ಹೆಚ್ಚಳದ ಪ್ರಮಾಣ ಕೇವಲ ಶೇ 0.2ರಷ್ಟು ಮಾತ್ರ. ಇದೇ ಅವಧಿಯಲ್ಲಿ ಚೀನಾದಲ್ಲಿ ಶೇ 10.6ರಷ್ಟು ವೇತನ ಏರಿಕೆ ಕಂಡಿದೆ ಎಂದು ವರದಿ ತಿಳಿಸಿದೆ.
ಕಾರ್ನ್ ಫೆರ್ರಿಯ ಹಾಯ್ ಗ್ರೂಪ್ ವಿಭಾಗದ ನೂತನ ವಿಶ್ಲೇಷಣೆಯ ಪ್ರಕಾರ, ಎಂಟು ವರ್ಷಗಳ ಹಿಂದಿನ ಆರ್ಥಿಕ ಕುಸಿತದ ನಂತರ ದೇಶದಲ್ಲಿನ ವೇತನ ಹೆಚ್ಚಳ ಪ್ರಮಾಣ ಶೇ 0.2ರಷ್ಟಿದ್ದು, ಇದೇ ಅವಧಿಯಲ್ಲಿ ಒಟ್ಟು ದೇಶಿಯ ಉತ್ಪನ್ನ(ಜಿಡಿಪಿ) ಗಳಿಕೆ ಶೇ 63.8ರಷ್ಟು ದಾಖಲಾಗಿದೆ.
ಇನ್ನೂ ಚೀನಾದಲ್ಲಿ ಶೇ 10.6, ಇಂಡೋನೇಷಿಯಾದಲ್ಲಿ ಶೇ 9.3 ಹಾಗೂ ಮೆಕ್ಸಿಕೋದಲ್ಲಿ ಶೇ 8.9ರಷ್ಟು ವೇತನ ಹೆಚ್ಚಳವಾಗಿದೆ. ಆದರೆ, ಟರ್ಕಿಯಲ್ಲಿ ಶೇ –34.4, ರಷ್ಯಾದಲ್ಲಿ ಶೇ -17.1ರಷ್ಟು ಸೇರಿದಂತೆ ಬ್ರೆಜಿಲ್ ಹಾಗೂ ಅರ್ಜೆಂಟಿನಾಗಳಲ್ಲಿ ವೇತನ ಹೆಚ್ಚಳ ಋಣಾತ್ಮಕ ಪ್ರಮಾಣದಲ್ಲಿದೆ.
ಅಧಿಕ ವೇತನ ಪಡೆಯುವಂತಹ ಉದ್ಯೋಗ ಸೃಷ್ಟಿಯಲ್ಲಿ ಭಾರತ ಇತರೆ ರಾಷ್ಟ್ರಗಳಿಗಿಂತ ಕಡಿಮೆ ಬೆಳವಣಿಗೆ ಕಂಡಿದೆ. ಇದರಿಂದಾಗಿ ಕುಶಲಿಗಳಲ್ಲದ ಅಥವಾ ಅರೆಕುಶಲಿಗರ ಪ್ರಮಾಣ ಹೆಚ್ಚುತ್ತಿದ್ದು, ವೇತನ ಪ್ರಮಾಣದಲ್ಲಿ ಇಳಿಕೆಯಾಗಿದೆ.
Comments are closed.