ಢಾಕಾ. ಸೆ.15: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಈದ್ ಆಚರಣೆ ನಂತರ ನಂತರ ಕಂಡು ಬಂದ ದೃಶ್ಯಗಳಿವು. ಬಕ್ರೀದ್‍ಗಾಗಿ ನೂರಾರು ಪ್ರಾಣಿಗಳನ್ನು ವಧೆ ಮಾಡಲಾಗಿತ್ತು. ಮಂಗಳವಾರ ಭಾರೀ ಮಳೆ ಸುರಿದ ನಂತರ ಪ್ರಾಣಿಗಳ ನೆತ್ತರಿನೊಂದಿಗೆ ಮಳೆನೀರು ಸೇರಿ ರಕ್ತದ ಕಾಲುವೆಯಾಗಿ ರಸ್ತೆಯ ತುಂಬೆಲ್ಲಾ ಹರಿಯಿತು.
ಢಾಕಾದಲ್ಲಿ ಭಾರೀ ಮಳೆಯ ನಡುವೆಯೇ ಪ್ರಾಣಿಗಳ ಬಲಿ ಮತ್ತು ಇತರ ಸಂಪ್ರದಾಯಗಳು ನಡೆದವು. ಆದರೆ ಸೂಕ್ತ ಚರಂಡಿ ವ್ಯವಸ್ಥೆ ಕಸಾಯಿ ಖಾನೆಯಿಂದ ಹರಿಯಲು ಬಿಟ್ಟ ಪ್ರಾಣಿಗಳ ರಕ್ತ ಹಾಗೂ ಅವುಗಳ ತ್ಯಾಜ್ಯಗಳು ಒಂದೆಡೆ ನಿಂತಿತ್ತು. ಭಾರೀ ವರ್ಷಧಾರೆಯಿಂದಾಗಿ ಮಳೆಯ ನೀರು ಇದರೊಂದಿಗೆ ಸೇರಿ ರಸ್ತೆಗಳೆಲ್ಲಾ ರಕ್ತಮಿಶ್ರತ ಕೆಂಪು ನೀರಿನಿಂದ ಆವೃತವಾಗಿ ಅಸಹ್ಯಕರ ವಾತಾವರಣ ನಿರ್ಮಾಣವಾಗಿತ್ತು.
ಒಳಚರಂಡಿ ವ್ಯವಸ್ಥೆ ದುರಸ್ತಿಗೆ ಕ್ರಮ ಕೈಗೊಳ್ಳದ ಜಿಲ್ಲಾಡಳಿತಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ.

Comments are closed.