
ನವದೆಹಲಿ: ದೆಹಲಿಯಲ್ಲಿ ಇಡೀ ಕುಟುಂಬ ವಿಷ ಸೇವಿಸಿದ್ದರಿಂದ ತಂದೆ ಮತ್ತು ಪುತ್ರಿ ಮೃತಪಟ್ಟು, ವ್ಯಕ್ತಿಯ ಪತ್ನಿ ಗಂಭೀರ ಸ್ಥಿತಿಯಲ್ಲಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ದೆಹಲಿಯ ಖೇರಾ ಡಾಬರ್ ಪ್ರದೇಶದಲ್ಲಿ ಭಗವಾನ್ ದಾಸ್ (50) ಮತ್ತು ಸರಿತಾ (20) ಮೃತಪಟ್ಟಿದ್ದು, ಭಗವಾನ್ ಅವರ ಪತ್ನಿ ಶಾರದಾ (48) ಅವರನ್ನು ರಾವ್ ತುಲಾ ರಾಮ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ,
“ಆತ್ಮಹತ್ಯೆಯ ವಿಷಯವಾಗಿ ಬೆಳಗ್ಗೆ 7:16 ಕ್ಕೆ ಕರೆ ಸ್ವೀಕರಿಸಿರುವುದಾಗಿ” ಉಪ ಪೊಲೀಸ್ ಕಮಿಶನರ್ ಸುರೇಂದರ್ ಕುಮಾರ್ ಹೇಳಿದ್ದಾರೆ.
ನಿವೃತ್ತ ಸರ್ಕಾರಿ ಅಧಿಕಾರಿ ಭಗವಾನ್ ದಾಸ್ ಮತ್ತು ಪುತ್ರಿ ಸರಿತಾ ಅವರು ಮೃತಪಟ್ಟಿರುವುದನ್ನು ವೈದ್ಯರು ಧೃಢೀಕರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೋಲೀಸರ ಪ್ರಕಾರ, ರಷ್ಯಾದಲ್ಲಿ ಎಂ ಬಿ ಬಿ ಎಸ್ ಓದುತ್ತಿದ್ದ ಭಗವಾನ್ ಅವರ ಪುತ್ರ 15 ದಿನಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಆದುದರಿಂದ ಕುಟುಂಬ ಖಿನ್ನತೆಗೆ ಒಳಪಟ್ಟಿತ್ತು ಎಂದು ತಿಳಿಯಲಾಗಿದೆ.
Comments are closed.