ರಾಷ್ಟ್ರೀಯ

ಸಿಂಹಗಳಿಂದ ತನ್ನ ಮರಿಗಳನ್ನು ರಕ್ಷಿಸಲು ತಾಯಿ ಜಿರಾಫೆಯ ಹೋರಾಟ: ಮನಕಲುಕುವಂತಿದೆ ಈ ವಿಡಿಯೋ

Pinterest LinkedIn Tumblr

https://www.youtube.com/watch?v=s6uNN6cdyUQ

ದಕ್ಷಿಣ ಆಫ್ರಿಕಾ : ತನ್ನ ಮರಿಯನ್ನ ಸಿಂಹಗಳಿಂದ ರಕ್ಷಿಸೋಕೆ ತಾಯಿ ಜಿರಾಫೆಯೊಂದು ಸಾಕಷ್ಟು ಪ್ರಯತ್ನಿಸಿ ವಿಫಲವಾದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದು, ಅದರ ವಿಡಿಯೋ ಮನಕಲಕುವಂತಿದೆ.

ಇಲ್ಲಿನ ಪಲನ್ಸ್ ಬರ್ಗ್ ಗೇಮ್ ರಿಸರ್ವ್‍ನಲ್ಲಿ ಜಿರಾಫೆ ಹಾಗೂ ಅದರ ಮರಿ ಬಿಸಿಲಿನಲ್ಲಿ ವಿರಮಿಸುತ್ತಿದ್ದವು. ಅಲ್ಲಿಗೆ ಬಂದ ಸಿಂಹಳ ಹಿಂಡು ಜಿರಾಫೆಗಳನ್ನ ಬೇಟೆಯಾಡೋಕೆ ಮುಂದಾದವು. ತಾಯಿ ಜಿರಾಫೆ ಹೇಗೋ ತಪ್ಪಿಸಿಕೊಳ್ತು. ಆದ್ರೆ ಕಾಲಿಗೆ ಗಾಯವಾಗಿದ್ದ ಮರಿ ಜಿರಾಫೆಯನ್ನ ಕೆಳಗೆ ಬೀಳಿಸಿದ ಸಿಂಹಗಳು ಅದರ ಮೇಲೆರಗಿದವು. ಈ ವೇಳೆ ದೂರದಲ್ಲಿದ್ದ ತಾಯಿ ಜಿರಾಫೆ ಮರಿಯ ಬಳಿ ಬಂದು ಸಿಂಹಗಳನ್ನ ಬೆದರಿಸಿ ಓಡಿಸಿದ್ದು ನಿಜ್ಕಕೂ ಅಚ್ಚರಿ ಮೂಡಿಸಿತ್ತು.

ನಂತರ ತಾಯಿ ಜಿರಾಫೆ ಮರಿಯ ಬಳಿ ಓಡಾಡುತ್ತಾ ಸಿಂಹಗಳ ಮೇಲೆ ಕಣ್ಣಿಟ್ಟಿತ್ತು. ಸಿಂಹವೊಂದು ಪದೇ ಪದೇ ಮರಿಯ ಬಳಿ ಬಂದರೂ ಅಷ್ಟೂ ಬಾರಿ ಅದನ್ನ ತಾಯಿ ಜಿರಾಫೆ ಓಡಿಸಿತ್ತು.

ಈ ವೇಳೆ ವಿಷಯ ತಿಳಿದು ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ರು. ಆದ್ರೆ ಜಿರಾಫೆಯ ಕಾಲಿಗೆ ತೀವ್ರವಾಗಿ ಗಾಯವಾಗಿದ್ದರಿಂದ 1 ಗಂಟೆ ಕಾಲ ಅದು ನರಳಾಡಿ ಸಾವನ್ನಪ್ಪಿದೆ.

Comments are closed.