ರಾಷ್ಟ್ರೀಯ

ಊರ್ಜಿತ್ ಪಟೇಲ್ ಅಧಿಕಾರ ಸ್ವೀಕಾರ

Pinterest LinkedIn Tumblr
In this photograph released by the Reserve Bank of India on January 14, 2013, the then-Deputy Governor of the Reserve Bank of India Urjit Patel poses for a photograph at an undefined location.  The Indian government August 20, 2016 named insider Urjit Patel as the new governor of the Reserve Bank of India, to replace popular central banker Raghuram Rajan when his term ends in September. "Dr Urjit R Patel new Governor of RBI," Frank Noronha, principal spokesperson, Government of India posted on Twitter.  / AFP PHOTO / RBI / HO / RESTRICTED TO EDITORIAL USE - MANDATORY CREDIT "AFP PHOTO / RBI" - NO MARKETING NO ADVERTISING CAMPAIGNS - DISTRIBUTED AS A SERVICE TO CLIENTS
Urjit Patel 

ನವದೆಹಲಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ 24ನೇ ಗವರ್ನರ್ ಆಗಿ ಊರ್ಜಿತ್ ಪಟೇಲ್ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.

ಸೆಪ್ಟೆಂಬರ್ 4 ನೇ ತಾರೀಖಿಗೆ ರಘುರಾಂ ರಾಜನ್ ಅವರ ಸೇವಾ ಅವಧಿ ಮುಗಿದಿದ್ದು, ಸೆ.5 ರಿಂದ ಮೂರು ವರ್ಷಗಳ ಕಾಲ ಊರ್ಜಿತ್ ಅವರು ಆರ್‍ ಬಿ ಐ ಗವರ್ನರ್ ಆಗಿ ಸೇವೆ ಸಲ್ಲಿಸಲಿದ್ದಾರೆ.

ಪಟೇಲ್‌ ಅವರು ಈ ಹಿಂದೆ ರಿಲಯನ್ಸ್‌ ಇಂಡಸ್ಟ್ರಿಸ್‌ ಜೊತೆ ಕೆಲಸ ಮಾಡಿದ್ದಾರೆ. ಡೆಪ್ಯುಟಿ ಗವರ್ನರ್ ಆಗಿ 2013ರಲ್ಲಿ ಅಧಿಕಾರ ಸ್ವೀಕರಿಸುವ ಮೊದಲು ಅವರು ಬಾಸ್ಟನ್‌ ಕನ್ಸಲ್ಟಿಂಗ್‌ ಗ್ರೂಪ್‌ನ ಸಲಹೆಗಾರ (ಇಂಧನ ಮತ್ತು ಮೂಲಸೌಕರ್ಯ) ಆಗಿದ್ದರು.

1990ರಿಂದ 1995ರವರೆಗೆ ಅವರು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಸಂಸ್ಥೆಯಲ್ಲಿ ಅಮೆರಿಕ, ಭಾರತ ಮತ್ತು ಬಹಾಮಾಸ್ ವ್ಯವಹಾರಗಳನ್ನು ನೋಡಿಕೊಳ್ಳುವ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ.

52 ವರ್ಷ ವಯಸ್ಸಿನ ಪಟೇಲ್‌ ಅವರು 1996–1997ರಲ್ಲಿ ಐಎಂಎಫ್‌ನಿಂದ ನಿಯೋಜನೆ ಮೇರೆಗೆ ಆರ್‌ಬಿಐನಲ್ಲಿ ಕೆಲಸ ಮಾಡಿದ್ದಾರೆ. 1998ರಿಂದ 2001ರವರೆಗೆ ಹಣಕಾಸು ಸಚಿವಾಲಯದ ಸಲಹೆಗಾರರಾಗಿ ಕೆಲಸ ನಿರ್ವಹಿಸಿದ್ದಾರೆ.

Comments are closed.