ರಾಷ್ಟ್ರೀಯ

            ಬಿಹಾರದಲ್ಲಿ ಪ್ರವಾಹ: ಮತ್ತೆ 19 ಸಾವು, ಸಾವಿನ ಸಂಖ್ಯೆ 198ಕ್ಕೆ ಏರಿಕೆ

Pinterest LinkedIn Tumblr

bihar-floodನವದೆಹಲಿ: ಬಿಹಾರದಲ್ಲಿ ಪ್ರವಾಹ ಮತ್ತೆ ಪ್ರವಾಹ ಆರಂಭವಾಗಿದ್ದು, ಪರಿಣಾಮ 19 ಮಂದಿ ಸಾವನ್ನಪ್ಪಿದ್ದಾರೆ. ಇದರಂತೆ ಸಾವಿನ ಸಂಖ್ಯೆ 198ಕ್ಕೆ ಏರಿಕೆಯಾಗಿದೆ.
ಪಾಟ್ನದಲ್ಲಿ 10 ಮಂದಿ, ಸರನ್ 6, ಲಖಿಸರೈ 1, ಸಮಸ್ತಿಪುರ್ 1, ಬೇಗುಸರೈ 1 ಮಂದಿ ಸಾವನ್ನಪ್ಪಿದ್ದಾರೆಂದು ವಿಪತ್ತು ನಿರ್ವಹಣಾ ಇಲಾಖೆ ಮಾಹಿತಿ ನೀಡಿದೆ.
ಬಿಹಾರದಲ್ಲಿ ಸುರಿಯುತ್ತಿರುವ ಭೀಕರ ಮಳೆ ಪರಿಣಾಮ ಹಿಮಾಚಲ ಪ್ರದೇಶದಲ್ಲೂ ಸ್ವಲ್ಪ ಮಟ್ಟದಲ್ಲಿ ಹಿಮಪಾತವಾಗುತ್ತಿದೆ. ಇದಲ್ಲದೆ, ಸೋನೆ, ಪುನ್ಪುನ್, ಬುರ್ಹಿ ಗಂದಕ್, ಘಾಗ್ರ, ಖೋಸಿ ನದಿಗಳು ಉಕ್ಕಿ ಹರಿಯುತ್ತಿದ್ದು, 41.90 ಲಕ್ಷ ಜನರ ಮೇಲೆ ಪರಿಣಾಮ ಬೀರಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅಪಾಯಕರ ಪ್ರದೇಶವಾಗಿರುವ ಕೆಲ ಜಿಲ್ಲೆಗಳಿಂದ 6.96 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ.

Comments are closed.