ರಾಷ್ಟ್ರೀಯ

ಸೆಕ್ಸ್‌ನಿಂದ ನಿಮ್ಮ ಮೆದುಳು ಚುರುಕಾಗುತ್ತೆ…ಸಂಶೋಧನೆ ಏನು ಹೇಳುತ್ತೆ ನೋಡಿ…

Pinterest LinkedIn Tumblr

SexHealth

ಸಂಗಾತಿಯೊಡನೆ ಅಧಿಕೃತವಾಗಿ ನಡೆಸುವ ಲೈಂಗಿಕ ಸಂಪರ್ಕದಿಂದ ಪುರುಷ ಮತ್ತು ಮಹಿಳೆಯರ ಮೆದುಳಿಗೆ ಹೆಚ್ಚಿನ ಹುರುಪು ದೊರೆಯುತ್ತದೆ ಎಂಬ ಅಂಶವು ಜಪಾನ್‌ ತಜ್ಞರು ನಡೆಸಿದ ಸಂಶೋಧನೆಯಿಂದ ಸಾಬೀತಾಗಿದೆ.

ಲೈಂಗಿಕ ವರ್ತನೆಗೆ ಸಂಬಂಧಪಟ್ಟಂತೆ ಮಹಿಳೆ ಮತ್ತು ಪುರುಷರ ಮೆದುಳಿನ ಕೆಲವು ಭಾಗಗಳಲ್ಲಿ ಬದಲಾವಣೆಯಾಗುತ್ತದೆ ಎಂದು ಸಂಶೋಧನೆ ಸಾಬೀತು ಪಡಿಸಿದೆ.

ಜಪಾನಿನ ಸೈಟಾಮಾ ವಿಶ್ವವಿದ್ಯಾಲಯದ ಶಿಂಜಿ ತ್ಸುಕಾಹಾರಾ ಮತ್ತು ಅವರ ಸಂಗಡಿಗರು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಪುರುಷರ ಮೆದುಳಿನ ಭಾಗದಲ್ಲಿ ಮಾರ್ಪಾಡಾಗುವುದನ್ನು ಪತ್ತೆ ಹಚ್ಚಿದ್ದಾರೆ. ಲೈಂಗಿಕ ಕ್ರಿಯೆ ನಡೆಸಿದ ಹಾಗೂ ನಡೆಸದ ಪುರುಷರ ಮೆದುನ್ನು ಕುರಿತು ಅಧ್ಯಯನ ನಡೆಸಿದಾಗ ಈ ಅಂಶ ಪತ್ತೆಯಾಗಿದೆ.

ಲೈಂಗಿಕ ಕ್ರಿಯೆ ನಡೆಸಿದವರಲ್ಲಿ ಮೆದುಳಿನ ನರ ಮಂಡಲದ ಮೇಲೆ ಒತ್ತಡ ಕಡಿಮೆಯಾಗುತ್ತದೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ಮಹಿಳೆಯರನ್ನು ನೋಡಿದ ಕೂಡಲೇ ಪುರುಷರಲ್ಲಿ ಉದ್ರೇಕವುಂಟಾಗುತ್ತದೆ ಇದಕ್ಕೆ ಬೆನ್ನುಹುರಿಯಲ್ಲಿರುವ ಭಾಗವೇ ಕಾರಣ ಎಂದು ತ್ಸುಕಾಹಾರಾ ತಿಳಿಸಿದ್ದಾರೆ.

ಈ ಎಲ್ಲ ಕಾರಣಗಳಿಂದಾಗಿ ಯಾವು ರೀತಿ ಲೈಂಗಿಕ ಕ್ರಿಯೆ ನಡೆಸಬೇಕು ಎಂಬುದನ್ನು ಅರಿಯಬೇಕು ಎಂದು ತ್ಸುಕಾಹಾರಾ ಹೇಳಿದ್ದಾರೆ.

Comments are closed.